ಕಾಲ್ ಸೆಂಟರ್ ಮೂಲಕ ನಕಲಿ ಇನ್ಸುರೆನ್ಸ್ ಪಾಲಿಸಿ ಹಾಗೂ ಸಾಲ ನೀಡಿ ಬಹುಕೋಟಿ ರುಪಾಯಿ ವಂಚಿಸಿದ್ದ 9 ಮಹಿಳೆಯರು ಸೇರಿ 11 ಜನರನ್ನು ಮುಂಬೈನ ನೋಯ್ಡಾ ಪೋಲಿಸರು ಬಂಧಿಸಿದ್ದಾರೆ. ವಂಚಕರ ಜಾಲಕ್ಕೆ ಕರ್ನಾಟಕದ ನಂಟಿದೆ ಎಂದು ವರದಿಯಾಗಿದೆ. ವಿಮಾ ಪಾಲಿಸಿ ಏಜೆಂಟ್ಗಳಾಗಿದ್ದ ಆಶಿಶ್ ಕುಮಾರ್, ಜೀತೇಂದ್ರ ವರ್ಮಾ ಹಗರಣದ ಮಾಸ್ಟರ್ ಮೈಂಡ್ಗಳು.
ಆರೋಪಿಗಳು ನಕಲಿ ಇನ್ಸುರೆನ್ಸ್ ಕಂಪೆನಿ ಸ್ಥಾಪಿಸಿ, 9 ಮಹಿಳೆಯರನ್ನು ನೇಮಿಸಿ ಕೊಂಡಿದ್ದರು. ನಕಲಿ ಆಧಾರ್ಕಾರ್ಡ ಬಳಸಿ ಸಿಮ್ ಕಾರ್ಡ್ ಪಡೆದ ಆರೋಪಿಗಳು, ಗ್ರಾಹಕರಿಗೆ ಕರೆ ಮಾಡಿ ಇನ್ಸುರೆನ್ಸ್ ಪಾಲಿಸಿ ತೆಗೆದುಕೊಂಡರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ವಂಚಿಸಿದ್ದರು. 1 ವರ್ಷದಲ್ಲಿ ಕೋಟ್ಯಾಂತರ ಹಣ ವಂಚಿಸಿದ್ದಾರೆ.
ಕರ್ನಾಟಕದ ಅರವಿಂದ್ ಎಂಬುವವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು 10 ಸಾವಿರ ರೂಪಾಯಿಗೆ ಬಾಡಿಗೆ ಪಡೆದುಕೊಂಡಿದ್ದರು. ವಂಚನೆಯ ಹಣವೆಲ್ಲಾ ಆ ಖಾತೆಗೆ ಜಮೆ ಆಗುತ್ತಿತ್ತು. ಆರೋಪಿಗಳು ಇಂಡಿಯಾ ಮಾರ್ಟ್ ನಿಂದ 2500 ರೂಪಾಯಿಗೆ ಆನ್ಲೈನ್ ಮೂಲಕ ಗ್ರಾಹಕರ ಪಟ್ಟಿ ಪಡೆದು, ಕರೆ ಮಾಡಿ, ವಂಚನೆ ಮಾಡಿದ್ದಾರೆ ಎನ್ನಲಾಗಿದೆ.