ಇತ್ತೀಚಿನ ದಿನಗಳಲ್ಲಿ ಜನರು ಪ್ರೀತಿಗಾಗಿ ಏನೆಲ್ಲಾ ಮಾಡುತ್ತಾರೆಂಬುದು ಎಲ್ಲರಿಗೂ ತಿಳಿದೇ ಇದೆ. ಪ್ರೀತಿಗಾಗಿ ಕುಟುಂಬವನ್ನೂ ತೊರೆಯುತ್ತಾರೆ. ಇನ್ನೂ ಕೆಲವರು ಜಾತಿ ಮತ್ತು ಧರ್ಮವನ್ನು ಬದಲಾಯಿಸಿಕೊಂಡುಬಿಡುತ್ತಾರೆ. ಬೇರೆ ಧರ್ಮದ ಹುಡುಗಿ ಮುಸ್ಲಿಂ ಗುಡುಗನನ್ನು ಪ್ರೀತಿಸಿದರೆ ಹುಡುಗಿಯೇ ಮುಸ್ಲಿಂ ಆಗಿ ಮತಾಂತರ ಆಗಿಬಿಡುತ್ತಾಳೆ. ಆದರೆ ಉತ್ತರ ಪ್ರದೇಶದ ಬಸ್ತಿಯಲ್ಲಿ ಯುವಕನೋರ್ವ ತನ್ನ ಪ್ರೇಯಸಿಗಾಗಿ ತನ್ನ ಸ್ವ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ.
10 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುವುದಕ್ಕಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರವಾದ ಘಟನೆ ನಡೆದಿದೆ. 34 ವರ್ಷದ ಸದ್ದಾಂ ಎಂಬಾತ ಶಿವಶಂಕರ್ ಸೋನಿ ಎಂದು ಹೆಸರು ಬದಲಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ವಿವಾಹಪೂರ್ವ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಕಾರಣ ನೀಡಿ 3 ದಿನ ಹಿಂದೆ ಯುವತಿಯೊಬ್ಬಳು ಸದ್ದಾಂ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಳು. ಆದರೆ ಈಗ ಅವರಿಬ್ಬರೂ ಸ್ವ ಇಚ್ಛೆಯಿಂದಲೇ ವಿವಾಹವಾಗಿದ್ದಾರೆ’ ಎಂದು ಕೊತ್ತಾಲಿ ಠಾಣಾಧಿಕಾರಿ ದೇವೇಂದ್ರ ಸಿಂಗ್ ತಿಳಿಸಿದರು. ‘ನಗರ ಬಜಾರ್ನಿವಾಸಿ ಸದ್ದಾಂ ಹುಸೇನ್ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಬೇರೆ ಬೇರೆ ಧರ್ಮದವರಾದ್ದರಿಂದ ಸದ್ದಾಂನ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ, ಹಾಗಾಗಿ ಯುವತಿ ದೂರು ದಾಖಲಿಸಿದ್ದಳು. ಆದರೆ ನಂತರ ಪ್ರಕರಣದಲ್ಲಿ ತಿರುವು ಲಭಿಸಿದೆ. ಭಾನುವಾರ ರಾತ್ರಿ ಸಿಟಿ ಮಾರ್ಕೆಟ್ ನ ದೇವಾಲಯದಲ್ಲಿ ಅವರಿಬ್ಬರೂ ಸ್ವ ಇಚ್ಛೆಯಿಂದ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.’ ಎಂದು ಅವರು ಹೇಳಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc