ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸ್ಪರ್ಶ್ ಹಾಸ್ಪಿಟಲ್ನಲ್ಲಿ ದಾಖಲಾಗಿದ್ದು ನಟಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಅಮೃತಾ ಅವರು ಸದ್ಯ ಆಸೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.
ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿ ಆರೋಗ್ಯದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ. ನಮಸ್ಕಾರ ಎಲ್ಲರಿಗೂ ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ, ಏನಾಗಿದೆ ಏನಾಯ್ತು ಅಂತ. ನಂಗೆ ಸಿವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ. ಎಕ್ಸ್ಟ್ರೀಂ ಲೆವೆಲ್ಗೆ ಹೋಗಿದೆ ಇನ್ಫೆಕ್ಷನ್, ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಕಳು ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮಗೆ ವಿಧಿಯಿಲ್ಲ. ಶೂಟಿಂಗ್ ಸೆಟ್ನಲ್ಲಿ ರೆಸ್ಟ್ ರೂಮ್ ಯೂಸ್ ಮಾಡೋಕಾಗುತ್ತದೆ. ನಮ್ಮ ಶೂಟಿಂಗ್ನವರು ಕ್ಯಾರವಾನ್ ತರಿಸಿದ್ರು. ಹೈಜೀನ್ ನೋಡಿಕೊಳ್ಳಬೇಕಾದ್ದು ತುಂಬಾ ಮುಖ್ಯ. ನಾನು ಈಗ ಹುಷಾರಾಗುತ್ತಿದ್ದೇನೆ ಎಂದಿದ್ದಾರೆ.