ಪುಷ್ಪ 2 ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಸಿನಿಮಾ ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದ್ದು ಭಾರೀ ಸುದ್ದಿಯಾಗಿದೆ. ಈ ನಡುವೆ ಹೈದರಾಬಾದ್ನಲ್ಲಿ ಸಂಧ್ಯ ಥಿಯೇಟರ್ನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಭಾರೀ ಸುದ್ದಿಯಾಗಿದೆ. ಅಲ್ಲು ಅರ್ಜುನ್ ಅವರನ್ನು ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳಾ ಅಭಿಮಾನಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಅವರ ಮಗ ಗಂಭೀರ ಸ್ಥಿತಿಯಲ್ಲಿದ್ದಾನೆ.
ಈ ಘಟನೆಗೆ ಸಂಬಂಧಿಸಿ ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಅರೆಸ್ಟ್ ಆಗಿ ರಿಲೀಸ್ ಆಗಿದ್ದರು. ಅವರ ತಂದೆ ಅಲ್ಲು ಅರವಿಂದ್ ಅವರು ಇತ್ತೀಚೆಗೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದರು.
ಈಗ ಪುಷ್ಪ 2 ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ಈಗ ರೇವತಿ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ರೇವತಿ ಅವರ 9 ವರ್ಷದ ಮಗ ಶ್ರೀ ತೇಜ್ನನ್ನು ಭೇಟಿ ಮಾಡಿದ್ದಾರೆ. ಶ್ರೀತೇಜ್ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದನು. ಡಿಸೆಂಬರ್ 4ರಂದು ನಡೆದ ಶೋ ವೇಳೆ ಈ ಘಟನೆ ನಡೆದಿತ್ತು. ಸದ್ಯ ನಿರ್ದೇಶಕ ಸುಕುಮಾರ್ ಅವರು ಬಾಲಕನನ್ನು ಭೇಟಿ ಮಾಡಿದ್ದಾರೆ.ಅವರು ಕುಟುಂಬದ ಜೊತೆಗೆ ಬಾಲಕನ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಬಾಲಕನ ತಂದೆ ಜೊತೆಗೂ ಅವರು ಮಾತನಾಡಿದ್ದಾರೆ. ಘಟನೆಯ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಕುಟುಂಬಕ್ಕೆ 5 ಲಕ್ಷ ಸಹಾಯಧನವನ್ನೂ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.