ಈಗಾಗಲೇ ಕೋವಿಡ್ ನಿಂದ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಬೆಸತ್ತಿರುವ ಸಾರ್ವಜನಿಕರಿಗೆ ಈಗ ಮತ್ತೋಂದು ಹೊಸ ಕೋವಿಡ್ ತಳಿಯ ಟೆನ್ಷನ್ ಶುರು ಆಗಿದೆ. ಎಸ್ ಅದೇನು ಈ ಹೊಸ ತಳಿ ಅಂತಿರಾ.. ಅಮೇರಿಕಾ, ಆಸ್ಟ್ರೆಲಿಯಾ, ಚಿಲಿ ದೇಶಗಳಲ್ಲಿ ಒಮಿಕ್ರೋನ್ ಕೊರೋನಾ ವೈರಸ್ ನ ಹೊಸ ಉಪತಳಯಾಗಿದೆ. ಹೌದು “ಪ್ಲಿರ್ಟ್” ಎಂದು ಹೆಸರಿಸಲಾಗಿರುವ ಈ ಉಪತಳಿ ಸದ್ಯ 91 ಪ್ರಕರಣಗಳು ಮಹರಾಷ್ಟ್ರದ ವಿವಿಧ ಭಾಗಗಳಲ್ಲಿ ಪತ್ತೆಯಾಗಿದೆ. ಈ ಕೋರೊನಾ ಹೊಸ ತಳಿಯು ಈ ಹಿಂದೆ ಪತ್ತೆಯಾಗಿದ್ದ ಜೆ ಎನ್-1 ತಳಿಯನ್ನು ಮಿರಿಸುವ ರೀತಿಯಲ್ಲಿ ಹರಡಬಹುದು ಎನ್ನುವ ಆತಂಕ ಶುರುವಾಗಿದೆ.
ಎಲ್ಲೆಲ್ಲಿಎಷ್ಟು ಕೇಸ್ ದಾಖಲು..?
ಪುಣೆ- 51
ಥಾಣೆ- 20
ಅಮರಾವತಿ, ಔರಂಗಬಾದ್, ಸೊಲ್ಹಾಪುರದಲ್ಲಿ ತಲಾ – 2
ಅಹಮದ್ಬಾದ್, ನಾಸಿಕ, ಲಾಥೋರ್, ಸಾಂಗ್ಲಿಯಲ್ಲಿ ತಲಾ-1
ಅಮೆರಿಕಾದಲ್ಲಿ ಈ ಕೋವಿಡ್ ಹೊಸ ತಳಿಯ ಮೊದಲ ಪ್ರಕರಣ ಜನವರಿಯಲ್ಲಿ ಪತ್ತೆಯಾಗಿತ್ತು. ಅಮರಿಕಾದಲ್ಲಿ-1125, ಚಿಲಿಯಲ್ಲಿ-1215, ಹಾಂಕ್ ಕಾಂಗ್ ನಲ್ಲಿ-696, ಆಸ್ಟೇಲಿಯಾ-664 ಪ್ರಕರಣಗಳು ದಾಖಲಾಗಿದ್ದು ಸದ್ಯ “ಪ್ಲಿರ್ಟ್” ಹೆಸರಿನ ಹೊಸ ತಳಿಯು ಭಾರತಕ್ಕೂ ಕೂಡಾ ಕಾಲಿಟ್ಟಿದ್ದು ಕೋರೊನಾ ಹಾವಳಿ ಮತ್ತೆ ಶುರುವಾಗುತ್ತಾ ಎನ್ನುವ ಬೀತಿ ಎಲ್ಲರಿಗೂ ಪ್ರಶ್ನೆಯಾಗಿದೆ.