ದಸರಾ ನವರಾತ್ರಿ ಶುರುವಾಗಿದೆ, ಶಾಲಾ ಮಕ್ಕಳಿಗೆ ದಸರಾ ರಜಾ ಶುರುವಾಗಿ ಪ್ರವಾಸದಲ್ಲಿರುವ ಈ ಸಮಯದಲ್ಲಿ ರಾಜಕಾರಣಿಗಳು ಸಹ ವಿಶ್ರಾಂತಿ ಬಯಸಿ ಹೊರಸಂಚಾರದಲ್ಲಿದ್ದಾರೆ. ಇಂದು ರಾಜ್ಯದ ಅರಣ್ಯ ಸಚಿವರಾಗಿರುವ ಈಶ್ವರ್ ಖಂಡ್ರೆ ರವರು ಭದ್ರ ಹಿನ್ನೀರಿನಲ್ಲಿ ದೋಣಿ ವಿಹಾರದಲ್ಲಿ ಭಾಗವಹಿಸಿ ವಿಹಂಗಮ ದೃಶ್ಯ ಸವಿದಿದ್ದಾರೆ.
ಅರಣ್ಯ ಇಲಾಖೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ KREDLನ ಅಧ್ಯಕ್ಷರು, ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡರು ಸಹ ಭದ್ರಾ ಹಿನ್ನೀರಿನಲ್ಲಿ ದೋಣಿ ವಿಹಾರದಲ್ಲಿ ಭಾಗವಹಿಸಿದ್ದರು. ವಿಶಾಲವಾದ ಭದ್ರಾ ಹಿನ್ನೀರಿನಲ್ಲಿ ನಿಸರ್ಗದ ವಿಹಂಗಮ ದೃಶ್ಯ ಸವಿಯುವ ಅನುಭವ ಅನನ್ಯ ಎಂದು ಖಂಡ್ರೆ ಬಣ್ಣಿಸಿದ್ದಾರೆ.