ಗದಗ: ಲೋಕ ಕಲ್ಯಾಣಕ್ಕಾಗಿ, ಯೋಧರ ಹಾಗೂ ರೈತರ ಒಳತಿಗಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ಆದರದಹಳ್ಳಿ ಗವಿ ಸಿದ್ದೇಶ್ವರ ಗುರುಪೀಠದ ಕುಮಾರ ಮಹಾರಾಜರು ಗಾಳಿ, ಬೆಳಕು ಬಾರದ ಗುಹೆಯಲ್ಲಿ 12 ದಿನಗಳ ಮೌನವ್ರತ ಅನುಷ್ಠಾನವನ್ನು ಇಂದು ಕೈಗೊಳ್ಳಲ್ಲಿದ್ದಾರೆ ಎಂದು ಗವಿ ಸಿದ್ದೇಶ್ವರ ಮಠದ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಗುರು ಪೀಠದಲ್ಲಿ ಭಕ್ತರು ವಿವಿಧ ಧಾರ್ಮಿಕ ಕೈಂಕರ್ಯಗಳನ್ನು,ದಾಸೋಹ ನಡೆಸುತ್ತಾರೆ. ಅನುಷ್ಠಾನವು ಅಗಷ್ಟ 29 ರಂದು ಪ್ರಾರಂಭವಾಗಿ ಸಪ್ಟೆಂಬರ್ 9 ರಂದು ಮಂಗಳವಾಗುತ್ತದೆ ಎಂದು ತಿಳಿದ್ದಾರೆ.
ಮೌನವ್ರತ ಆರಂಭ ದಿನ ಸ್ವಾಮೀಜಿ ಗುಹೆ ಪ್ರವೇಶದ ಹಲವಾರು ಕಾರ್ಯಗಳು ಜರಗುತ್ತದೆ. ಪತ್ರಿಕಾ ಪ್ರಕಟಣೆಯಲ್ಲಿ ಕುಮಾರ ಮಹಾರಾಜರು, ‘ಜಗತ್ತಿನ ಕಲ್ಯಾಣಕ್ಕಾಗಿ ಕೈಗೊಂಡ ಮೌನವ್ರತ ಫಲಕೊಡಲಿದೆ. ಸಾಂಕ್ರಾಮಿಕ ರೋಗದಿಂದ ಪರದಾಟ ನಿಲ್ಲಲಿದೆ. ಮುಂದಿನ ದಿನಮಾನದಲ್ಲಿ ರೈತರಿಗೆ ಹಾಗೂ ಯೋಧರಿಗೆ ಒಳಿತಾಗಲಿದೆ’ ಎಂದು ತಿಳಿಸಿದ್ದಾರೆ.