ಶಾಲಾ ಮಕ್ಕಳ ಕೂದಲು ಕತ್ತರಿಸಿದ ಶಿಕ್ಷಕನಿಗೆ ಪೋಷಕರೇ ಧರ್ಮದೇಟು ಕೊಟ್ಟಿರುವ ಘಟನೆ ಗದಗ ಜಿಲ್ಲೆಯ ಬೆಟಗೇರಿಯ ಸೆಂಟ್ ಮೇರಿಸ್ ಶಾಲೆಯಲ್ಲಿ ನಡೆಸಿದೆ. 6 ಮಕ್ಕಳ ಕೂದಲಿಗೆ ಕತ್ತರಿ ಹಾಕಿದ ಕಂಪ್ಯೂಟರ್ ಶಿಕ್ಷಕ ಬೆನೋಯ್ಗೆ ಬಿಇಒ ಎದುರಲ್ಲೇ ಪೋಷಕರು ಥಳಿಸಿದ್ದಾರೆ. ಕೂದಲು ಕಟ್ ಮಾಡುವ ವೇಳೆ 7ನೇ ತರಗತಿ ವಿದ್ಯಾರ್ಥಿ ಹಣೆಗೆ ಕತ್ತರಿಯಿಂದ ಗಾಯವಾಗಿದ್ದು ಪೋಷಕರನ್ನು ಸಿಟ್ಟಿಗೆಬ್ಬಿಸಿದೆ. ದುರ್ವರ್ತನೆ ತೋರಿರೋ ಶಿಕ್ಷಕನನ್ನು ವಜಾಗೊಳಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ಬಗ್ಗೆ ವರದಿ ಪಡೆದಿರುವ ಬಿಇಒ ಮೇಲಧಿಕಾರಿಗಳ ಸೂಚನೆ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.