ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆಗುವ ಪ್ರಶ್ನೆಯೂ ಇಲ್ಲ ಎಂದು ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಕಿಡಿಕಾರಿದರು.
ಗದಗ ಹೊರವಲಯದ ನಾಗಾವಿ ಬಳಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆಗುವ ಪ್ರಶ್ನೆಯೂ ಇಲ್ಲ. ಸಿದ್ದರಾಮಯ್ಯನವರೇ ನಮ್ಮ ಸಿಎಂ ಹಾಗೂ ನಮ್ಮ ನಾಯಕರು. ಅನಾವಶ್ಯಕವಾಗಿ ಸಿಎಂ ಸ್ಥಾನದ ಬಗ್ಗೆ ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಸಿಎಂ ಸ್ಥಾನದ ರೇಸ್ನಲ್ಲಿ ಹೆಚ್.ಕೆ.ಪಾಟೀಲ್ ಹೆಸರು ಕೇಳಿ ಬರುತ್ತಿರುವ ವಿಷಯವಾಗಿ ಮಾತನಾಡಿ, ಸಿಎಂ ಸ್ಥಾನ ಖಾಲಿಯೂ ಇಲ್ಲ. ಆ ಪ್ರಶ್ನೆ ಉದ್ಭವಿಸುವುದಿಲ್ಲ, ಇದು ಸಮಯವೂ ಅಲ್ಲ. ಈ ಬಗ್ಗೆ ಅನಾವಶ್ಯಕ ಚರ್ಚೆಯನ್ನು ವಿವೇಕ ಇದ್ದವರು ಮಾಡೋದಿಲ್ಲ ಎಂದು ಕಿಡಿಕಾರಿದರು.
ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆ, ಪ್ರಗತಿ, ಸಮನ್ವಯ ಕಾರ್ಯಗಳಿಗೆ ಸಂಬಂಧಿಸಿದ ಸಚಿವರು ಕ್ರಮವಹಿಸಲು ಸಮಿತಿ ರಚನೆಯ ಕುರಿತು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವರ ಅಧ್ಯಕ್ಷತೆಯಲ್ಲಿ 5 ಜನ ಸಚಿವರ ಸಮಿತಿ ರಚಿಸಿದ್ದಾರೆ. ಪ್ರಮಾದಗಳು, ತಪ್ಪು ಎಸಗಿರುವ ಬಗ್ಗೆ ತನಿಖೆ ಹಾಗೂ ಮುಂದಿನ ಕ್ರಮಗಳನ್ನು ಶಿಫಾರಸು ಮಾಡಲು ಈ ಬಗ್ಗೆ ನಮ್ಮ ಸಮಿತಿ ಬೇಗ ಕೆಲಸ ಮಾಡಲು ಪ್ರಾರಂಭ ಮಾಡಲಿದೆ ಎಂದರು.