ಚಿನ್ನದ ಬೆಲೆ ಕುಸಿಯುವುದು ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ. ನಾಲ್ಕು ತಿಂಗಳ ಹಿಂದಿದ್ದ ಮಟ್ಟಕ್ಕೆ ಬೆಲೆ ಇಳಿದಿದೆ. ಮಾರ್ಚ್ 29ಕ್ಕೆ 22 ಗ್ರಾಮ್ ಚಿನ್ನದ ಬೆಲೆ 6,300 ರೂ ಇತ್ತು. ಇವತ್ತೂ ಕೂಡ ಅದೇ ಬೆಲೆಗೆ ಇಳಿದಿದೆ. ಜುಲೈ 18ರಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 6,860 ರೂ ಇತ್ತು. ಈಗ 6,300 ರೂಗೆ ಇಳಿದಿದೆ. ಹತ್ತು ದಿನದಲ್ಲಿ ಬರೋಬ್ಬರಿ 560 ರುಪಾಯಿ ನಷ್ಟು ಬೆಲೆ ಇಳಿಕೆ ಆಗಿರುವುದು ಗಮನಾರ್ಹ. ಬಜೆಟ್ ಪೂರ್ವದಿಂದಲೇ ಚಿನ್ನದ ಬೆಲೆ ಇಳಿಯಲು ಆರಂಭಿಸಿತಾದರೂ ಬಜೆಟ್ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಇಳಿಸಿದ ಬಳಿಕ ತೀವ್ರ ಮಟ್ಟದಲ್ಲಿ ಭಾರತದಲ್ಲಿ ಬೆಲೆ ಕುಸಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 63,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 68,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 63,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,425 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 28ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 842.50 ರೂ