ಆಭರಣ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ..? ಅದರಲ್ಲೂ ಹೆಣ್ಣು ಮಕ್ಕಳು ಕೂಡಿಡುವ ಎಲ್ಲಾ ದುಡ್ಡನ್ನು ಚಿನ್ನದ ಆಭರಣ ಕೊಳ್ಳಲು ಖರ್ಚು ಮಾಡ್ತಾರೆ. ಚಿನ್ನದ ಒಡವೆಗಳು ಅಂದ್ರೆ ಸಾಕು ಎಲ್ಲಾ ಹೆಣ್ಣು ಮಕ್ಕಳು ಫುಲ್ ಖುಷ್ ಆಗ್ತಾರೆ.ನಮ್ಮಗೆಲ್ಲರಿಗೂ ತಿಳಿದಿರೋ ಹಾಗೆ ಕೆಲವು ವರ್ಷಗಳಿಂದ ಚಿನ್ನದ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಳೆದ ತಿಂಗಳು ಬೆಲೆ ಏರಿಕೆ ಆಗಿತ್ತು. ಆದ್ರೆ ಈಗ ತಿಂಗಳ ಆರಂಭದಲ್ಲೇ ಇಂದು 2100 ರೂಪಾಯಿ ಕುಸಿತ ಕಂಡಿದೆ.
ಕಷ್ಟ ಬಂದರು ಚಿನ್ನ ಸಹಾಯಕ್ಕೆ ಬರುತ್ತದೆ ಎಂದು ಕೆಲವರು ಅದನ್ನ ಕೊಂಡುಕೊಳ್ತಾರೆ. ಇದರ ಪ್ರಾಮುಖ್ಯತೆ ನಮ್ಮ ಭಾರತೀಯರಿಗೆ ಅತಿ ಹೆಚ್ಚು ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂ ಗೆ 2100 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,25,500 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ, ಈಗ 2000 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 200 ರೂ. ರಷ್ಟು ಕಡಿತವಾಗಿದೆ.