ಡಾಲರ್ ಮೌಲ್ಯದ ಏರಿಕೆಯಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಕುಸಿತ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಇಂದು 10 ಗ್ರಾಂಗೆ 200 ರುಪಾಯಿ ಇಳಿಕೆಯಾಗಿ 66,600 ತಲುಪಿದೆ. 100 ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ ಇಂದು 2000 ರುಪಾಯಿಂದ 6,66,000 ರುಪಾಯಿಗೆ ಇಳಿದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 220 ರುಪಾಯಿ ಇಳಿಕೆಯಾಗಿ 72,650 ರುಪಾಯಿ ತಲುಪಿದೆ.
ಇಂದು 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಗಳು 54,490 ಮತ್ತು 18 ಕ್ಯಾರೆಟ್ ಹಳದಿ ಲೋಹದ 100 ಗ್ರಾಂ ಬೆಲೆ ಶುಕ್ರವಾರ 1700 ರುಪಾಯಿ ನಷ್ಟು ಕುಸಿದ ನಂತರ ರೂ 5,44,900 ರಷ್ಟಾಗಿದೆ.
ಸತತ 2 ದಿನಗಳ ಕಾಲ ಸ್ಥಿರವಾದ ನಂತರ ಭಾರತದಲ್ಲಿ ಬೆಳ್ಳಿ ಬೆಲೆ ಇಂದು ಇಳಿಕೆ ಕಂಡಿದೆ. ಆಗಸ್ಟ್ 23 ರಂದು 1 ಕೆಜಿ ಬೆಳ್ಳಿ ಬೆಲೆ 300 ರುಪಾಯಿ ಇಳಿಕೆಯ ನಂತರ 86,700 ರುಪಾಯಿ ನಷ್ಟಿತ್ತು. ಭಾರತದಲ್ಲಿ ಇಂದು 100 ಗ್ರಾಂ ಬೆಳ್ಳಿ ಬೆಲೆ 30 ರುಪಾಯಿ ಕಡಿಮೆಯಾಗಿ 8,670 ರುಪಾಯಿ ಆಗಿದೆ.