ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಮಂಗಳವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗಿದೆ. 10ಗ್ರಾಂ ಚಿನ್ನದ ದರವು 1,400 ರುಪಾಯಿ ಏರಿಕೆಯಾಗಿದ್ದು, 74,150ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ 3,150 ರುಪಾಯಿ ಹೆಚ್ಚಳವಾಗಿದ್ದು 87,150 ಕ್ಕೆ ತಲಿಪಿದೆ. ಕೇಂದ್ರ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರವು ಕಡಿತಗೊಳಿಸಿತ್ತು, ಹಾಗಾಗಿ, ಜುಲೈ 23 ರಂದು ಚಿನ್ನದ ಧಾರಣೆಯು 10ಗ್ರಾಂ ಗೆ 3,350 ಕಡಿಮೆಯಾಗಿತ್ತು. ಆದರೆ ಈಗ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.