ಚಿನಿವಾರ ಪೇಟೆಯಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಇಳಿಕೆ ಸಹಜವಾಗಿಯೇ ನಡೆಯುತ್ತಿರುತ್ತದೆ. ಆದರೆ ಈ ವಾರ ಚಿನ್ನದ ಬೆಲೆ ಸತತ ಏರಿಕೆ ಕಂಡಿತ್ತು. ಬಳಿಕ ವಾರಾಂತ್ಯದಲ್ಲಿ ಇಳಿಕೆಯಾಗಿತ್ತು. ಈ ವಾರದ ಮೊದಲನೇ ದಿನವಾದ ಭಾನವಾರವೇ ಚಿನ್ನದ ಬೆಲೆ ಏರಿಕೆ ಕಂಡಿದೆ. ಈ ನಡುವೆ ಸೋಮವಾರವಾದ ಇಂದೂ ಕೂಡ ಚಿನ್ನದ ಬೆಲೆ ಏರಿಕೆ ಕಂದಿದ್ದು ಪ್ರತೀ ಗ್ರಾಂ ಬಂಗಾರದ ಬೆಲೆ 15 ರುಪಾಯಿಯಷ್ಟು ಹೆಚ್ಚಳ ಕಂಡಿದೆ. ಹೀಗಾಗಿ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಗೆ 78000 ರುಪಾಯಿಯ ಗಡಿದಾಟಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸುಮಾರು 10 ಪೈಸೆಯಷ್ಟು ಗ್ರಾಂ ಗೆ ಇಳಕೆಯಾಗಿದೆ.
ಬೆಂಗಳೂರಿನಲ್ಲಿ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಗೆ ಸುಮಾರು 78000 ರುಪಾಯಿಯಷ್ಟಿದೆ. ಆಭರಣ ಚಿನ್ನದ ಬೆಲೆ ಸುಮಾರು 71500 ರುಪಾಯಿಯ ಗಡಿ ದಾಟಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 10 ಗ್ರಾಂ ಗೆ 926 ರುಪಾಯಿಯಾಗಿದೆ. ದಿನೇ ದಿನೇ ಚಿನ್ನ ಬೆಳ್ಳಿ ಬೆಲೆ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಈ ನಡುವೆ ಯಥಾಸ್ಥಿತಿ ಯಲ್ಲಿ ಕೇವಲ ಒಂದೆರಡು ದಿನದ ಮಟ್ಟಿಗೆ ಮಾತ್ರ ಇರುತ್ತದೆ. ಆನಂತರ ಚಿನ್ನ ಹಾಗೂ ಬೆಳ್ಳಿ ಬೆಲೆ ಎರಡೂ ಸಹ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಒಡವೆ ಆಭರಣ ಮಾಡಿಸಿಕೊಳ್ಳುವವರು ಪ್ರತಿನಿತ್ಯ ಬೆಲೆ ಎಷ್ಟಿದೆ ಎಂದು ತಿಳಿದುಕೊಂಡು ಆಭರಣದ ಅಂಗಡಿಗೆ ತೆರಳಬೇಕಾಗಿದೆ.
ಬೆಂಗಳೂರಿನಲ್ಲಿ ಇರುವ ರೇಟ್ ಚೆನ್ನೈ, ಮುಂಬೈ ನಲ್ಲಿ ಇರುವುದಿಲ್ಲ ಹೀಗಾಗಿ ಭಾರತದಾದ್ಯಂತ ಚಿನ್ನದ ಬೆಲೆ ಹಾಗೂ ಬೆಳ್ಳಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಚಿನ್ನದ ಗಟ್ಟಿ ಖರೀದಿಸಿದ ನಂತರ ಚಿನಿವಾರ ಪೇಟೆಯಲ್ಲಿ ಯಾವ ರೀತಿ ಚಿನ್ನಕ್ಕೆ ಬೆಲೆ ಫಿಕ್ಸ್ ಆಗುತ್ತದೆಯೋ ಆ ಬೆಲೆಯ ಮೇಲೆ ದೇಶಾದ್ಯಂತ ಚಿನ್ನದ ಬೆಲೆ ಆ ದಿನಕ್ಕೆ ನಿರ್ಧಾರ ಆಗುತ್ತದೆ.
ಒಟ್ಟಾರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗ್ರಾಂಗೆ 15 ರುಪಾಯಿ ಏರಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ. ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಶುಭ ಸದ್ದಿ ಅಂತನೇ ಹೇಳಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಯಾವುದೇ ರೀತಿಯಲ್ಲಿ ಮೋಸವಾಗುವುದಿಲ್ಲ. ಕಾರಣ ಅದರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೇ ಹೊರತು ತಗ್ಗುವ ರೀತಿಯಾದಂತಹ ವಾತಾವರಣ ಕಂಡುಬಂದಿಲ್ಲ.
ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ:
- ಅಪರಂಜಿ ಬಂಗಾರದ ಬೆಲೆ : 78000 ರುಪಾಯಿ
- ಆಭರಣ ಬಂಗಾರದ ಬೆಲೆ : 71500 ರುಪಾಯಿ
- ಬೆಳ್ಳಿ ಬೆಲೆ 10 ಗ್ರಾಂ ಗೆ : 976 ರುಪಾಯಿ