ಚಿನ್ನದ ಬೆಲೆ ಸತತ ಮೂರನೇ ಬಾರಿ ಹೆಚ್ಚಳ ಕಂಡಿದೆ. ಇಂದು ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಹೊಸ ದರಗಳು ಪ್ರಕಟವಾಗಿದ್ದು, ಅದರಂತೆ ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿದೆ. ಮೂರು ದಿನದಲ್ಲಿ ಒಟ್ಟರೆ 70 ರೂನಷ್ಟು ಬೆಲೆ ಹೆಚ್ಚಳವಾದಂತಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಬೆಂಗಳೂರಿನಲ್ಲಿ ಗ್ರಾಮ್ಗೆ 2 ರೂ ಏರಿಕೆ ಆಗಿರುವುದು ಬಿಟ್ಟರೆ ಭಾರತದಲ್ಲಿ ಎಲ್ಲೆಡೆ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 71,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,200 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ