ಸರ್ಕಾರಿ ನೌಕರಿ ಬಯಸುವ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇಂಧನ ಇಲಾಖೆಯಲ್ಲಿ ಭರ್ಜರಿಯಾಗಿ 2200 ಲೈನ್ಮ್ಯಾನ್ಗಳ ನೇಮಕಾತಿಗೆ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯಾದ್ಯಂತ 2,200 ಲೈನ್ ಮ್ಯಾನ್ ಗಳ ನೇಮಕಾತಿ ನಡೆಸಲಾಗುತ್ತದೆ ಎಂದು ಇಂಧನ ಸಚಿವ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ. ರಾಜ್ಯದಾದ್ಯಂತ ಏಕಕಾಲದಲ್ಲಿ 2,200 ಲೈನ್ ಮ್ಯಾನ್ಗಳ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗ ದೊರೆಯಲಿದೆ. ಹಿಂದೆ ಲೈನ್ ಮ್ಯಾನ್ಗಳ ನೇಮಕಾತಿ ಏಕಕಾಲದಲ್ಲಿ ನಡೆಯದೆ, ಒಂದು ಕಡೆ ಅರ್ಜಿ ಸಲ್ಲಿಸಿದವರು ಮತ್ತೊಂದು ಜಿಲ್ಲೆಗೂ ಅರ್ಜಿ ಹಾಕುತ್ತಿದ್ದರು. ಉದ್ಯೋಗ ಪಡೆದವರು ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಮುಂದೆ, ಇಂತಹ ಸಮಸ್ಯೆಗಳು ತಲೆದೋರುವುದಿಲ್ಲ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.