ಶಿವಸೇನೆ ಸೇರ್ಪಡೆಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ಗೆ ನೀಡಲಾಗಿದ್ದ ಹುದ್ದೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ರದ್ದುಗೊಳಿಸಿದ್ದಾರೆ.
ಇದನ್ನೂ ಓದಿ: ಇತಿಹಾಸದಲ್ಲೇ ಕಂಡಿರದ ಮಳೆ; ಬೆಚ್ಚಿಬಿದ್ದ ಮುಳ್ಳಯ್ಯನಗಿರಿ..!
ಪಾಂಗರ್ಕರ್ ಶನಿವಾರ ಶಿವಸೇನೆ (ಶಿಂಧೆ ಬಣ) ಸೇರಿದ್ದ. ಬಳಿಕ ಈತನಿಗೆ ಜಲ್ನಾ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಮಾಡಲಾಗಿತ್ತು. ಕೊಲೆ ಕೇಸಿನ ಆರೋಪಿಗೆ ಉತ್ತಮ ಸ್ಥಾನ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ನೇಮಕ ರದ್ದತಿಗೆ ಶಿಂಧೆ ಆದೇಶಿಸಿದ್ದಾರೆ. 2017 ಸೆ.5ರಂದು ನಡೆದಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ 2018ರಲ್ಲಿ ಶ್ರೀಕಾಂತ್ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಕಳೆದ ಸೆ.4ರಂದಷ್ಟೇ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು.