ದಂಪತಿಗಳು ಕಾರಿನಲ್ಲಿ ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ 4.5 ಕೆಜಿ ಮಗುವಿಗೆ ಜನ್ಮ ನೀಡಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಮಹಿಳೆ ತನ್ನ ಗಂಡನೊಂದಿಗೆ ಆಸ್ಪತ್ರೆಗೆ ಹೋಗುತ್ತಿದ್ದಾಗ ಅನಿರೀಕ್ಷಿತವಾಗಿ ಕಾರಿನಲ್ಲೇ ಡೆಲಿವರಿಯಾಗಿದೆ. ವೈದ್ಯಕೀಯ ಸಹಾಯವಿಲ್ಲದೆ ಹೆರಿಗೆ ಮಾಡುವ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ, ಅವರು ಕಾರಿನಲ್ಲಿ ಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ. ಆಕೆಯ ಗಂಡನೇ ಈ ಘಟನೆಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಮಹಿಳೆಯೊಬ್ಬರು ಡೆಲಿವರಿಗೆ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗಲೇ ವಾಟರ್ ಬ್ರೇಕ್ ಆಗಿತ್ತು. ನೀರು ಇದ್ದಕ್ಕಿದ್ದಂತೆ ಒಡೆದುಹೋದಾಗ ತಮಗೆ ಇನ್ನೂ ಜಾಸ್ತಿ ಸಮಯವಿಲ್ಲ ಎಂದು ಆಕೆಗೆ ತಿಳಿಯಿತು. ಇದರಿಂದ ಆಕೆಗೆ ಗಾಬರಿಯಾಯಿತು. ಆಸ್ಪತ್ರೆಗೆ ಹೋಗಲು ಸಮಯವಿಲ್ಲದ ಕಾರಣ ಆಕೆಯ ಪತಿ ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದ ಹೆಂಡತಿಗೆ ಕಾರಿನಲ್ಲೇ ಡೆಲಿವರಿಗೆ ಸಹಕಾರ ನೀಡಿದ್ದಾನೆ. ಆಕೆಗೆ ನೋವು ಹೆಚ್ಚಾಗುತ್ತಿದ್ದಂತೆ ಕಾರನ್ನು ನಿಲ್ಲಿಸಿದಾಗ ಆಕೆ 4.5 ಕೆ.ಜಿ. ತೂಕದ ಮಗುವಿಗೆ ಜನ್ಮ ನೀಡಿದ್ದರು.
ಕಾರಿನ ಮುಂಭಾಗದಲ್ಲಿ ಕುಳಿತಿದ್ದ ಗರ್ಭಿಣಿಯ ಸೀಟ್ ಬೆಲ್ಟ್ ಬಿಚ್ಚಿದ ಆಕೆಯ ಗಂಡ ಕಾರಿನಲ್ಲೇ ಡೆಲಿವರಿಗೆ ಸಹಾಯ ಮಾಡಿದನು. ಪತಿ ಆಕೆಯ ಸೀಟ್ ಬೆಲ್ಟ್ ತೆಗೆದು, ವೈದ್ಯಕೀಯ ಸಹಾಯವಿಲ್ಲದೆ ಹೆರಿಗೆಯಾಗಿದೆ.
ಹೆರಿಗೆಯಾದ ಕೆಲವೇ ಸೆಕೆಂಡುಗಳಲ್ಲಿ ರಕ್ತಸಿಕ್ತವಾಗಿದ್ದ ಮಗು ಜೋರಾಗಿ ಅಳಲಾರಂಭಿಸಿದೆ. ಮಗು ಆರೋಗ್ಯವಾಗಿದೆ ಎಂದು ತಿಳಿದು ಆ ಮಹಿಳೆ ನಿಟ್ಟುಸಿರು ಬಿಟ್ಟಿದ್ದಾರೆ. ಆ ಮಹಿಳೆಯ ಧೈರ್ಯಶಾಲಿ ಕ್ಷಣದ ವೀಡಿಯೋ ವೈರಲ್ ಆಗಿದೆ.