ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡಗೆ ಕೇಂದ್ರ ಸಚಿವ ಕುಮಾರಸ್ವಾಮಿ ಶಾಕ್ ಕೊಟ್ಟಿದ್ದಾರೆ. ಜಿಟಿಡಿ ಜೊತೆಗೆ ಅಣ್ಣ ಹೆಚ್.ಡಿ. ರೇವಣ್ಣಗೂ ಕುಮಾರಸ್ವಾಮಿ ಶಾಕ್ ಕೊಟ್ಟಿದ್ದಾರೆ. ಅದೇನೆಂದರೆ, ಚನ್ನಪಟ್ಟಣ ಚುನಾವಣಾ ಪ್ರಚಾರದಿಂದ ಇಬ್ಬರನ್ನ ದೂರವಿಟ್ಟಿದ್ದಾರೆ.
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಜಿಟಿ ದೇವೇಗೌಡ ಹಾಗೂ ರೇವಣ್ಣ ಅವರನ್ನ ದೂರವಿಟ್ಟಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರೋ ಜಿಟಿ ದೇವೇಗೌಡ ಅವರು ಇತ್ತೀಚಿಗೆ ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿದ್ದರು. ಮುಡಾ ಕೇಸ್ ಸಂಬಂಧ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್ ಮಾಡಿದ್ದರು. ಕುಮಾರಸ್ವಾಮಿಗೆ ನೇರವಾಗಿಯೇ ಟಾಂಗ್ ಕೊಟ್ಟಿದ್ದರು. ಹೀಗಾಗಿ ಸ್ಟಾರ್ ಪ್ರಚಾರಕರ ಲಿಸ್ಟ್ ನಿಂದ ಜಿಟಿ ದೇವೇಗೌಡ ಅವರ ಹೆಸರನ್ನ ಕೈ ಬಿಡಲಾಗಿದೆ. ಇನ್ನು ಕಿಡ್ನ್ಯಾಪ್ ಕೇಸ್ ಆರೋಪಿ ರೇವಣ್ಣ ಬಂದ್ರೆ ಪಕ್ಷಕ್ಕೆ ಮುಜುಗರ ಒಂಟಾಗಾಬಹುದೆಂದು ರೇವಣ್ಣ ಅವರ ಹೆಸರನ್ನೂ ಸಹ ಪಟ್ಟಿಯಿಂದ ಹೊರಗುಳಿಸಿದ್ದಾರೆ.