ಶಾಲೆಯ ಮೊದಲನೇ ಮಹಡಿಯ ಕ್ಲಾಸ್ ರೂಮ್ನಲ್ಲಿ ಕುಳಿತು ಊಟ ಮಾಡುವಾಗ ಗೋಡೆ ಕುಸಿದು ಬಿದ್ದ ಪರಿಣಾಮ 5 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಜರಾತ್ನ ವಡೋದರದ ಶ್ರೀ ನಾರಾಯಣ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.
ವಡೋದರಾದ ಶ್ರೀ ನಾರಾಯಣ ವಿದ್ಯಾಲಯದಲ್ಲಿ ಎಂದಿನಂತೆ ತರಗತಿ ಆರಂಭವಾಗಿದ್ದವು. ಅದರಂತೆ ಮಧ್ಯಾಹ್ನದ ವೇಳೆ ಎಲ್ಲಾ ಮಕ್ಕಳನ್ನು ಊಟಕ್ಕೆ ಬಿಡಲಾಗಿತ್ತು. ಈ ವೇಳೆ 7ನೇ ತರಗತಿ ಮಕ್ಕಳು ಮೊದಲನೇ ಮಹಡಿಯ ಕೊಠಡಿಯಲ್ಲಿ 12:30ರ ಸುಮಾರಿಗೆ ಕುಳಿತು ಊಟ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಇದರಿಂದ ಕೊಠಡಿಯಲ್ಲಿದ್ದ ಸುಮಾರು ಮಕ್ಕಳ ಪೈಕಿ 5 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳು ಆಗಿವೆ. ಮಕ್ಕಳ ಸೈಕಲ್ ಮೇಲೆ ಗೋಡೆ ಬಿದ್ದಿದ್ದರಿಂದ 10 ರಿಂದ 12 ಸೈಕಲ್ ನಜ್ಜುಗುಜ್ಜಾಗಿವೆ ಎಂದು ಹೇಳಲಾಗುತ್ತಿದೆ.