ಗುಜರಾತ್ನ ಸೂರತ್ ಸಚಿನ್ ಪಾಲಿ ಗ್ರಾಮದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. 30 ಪ್ಲ್ಯಾಟ್ಗಳಿರುವ 5 ಅಂತಸ್ತಿನ ಕಟ್ಟಡವು ಶನಿವಾರ ಕುಸಿದಿತ್ತು. ಘಟನೆ ವೇಳೆ ಕೇವಲ 4 ಪ್ಲ್ಯಾಟ್ಗಳಲ್ಲಿ ಮಾತ್ರ ಜನ ವಾಸ ಇದ್ದರು. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲಿ ಕಾರ್ಯಾಚಾರಣೆ ನಡೆಸುತ್ತಿದೆ .ಬಟ್ಟೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಈ ಕಟ್ಟಡದಲ್ಲಿ ಬಾಡಿಗೆಗೆ ನೆಲೆಸಿದ್ದರು. 8 ವರ್ಷ ಹಳೆಯ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಇದರಿಂದ ಪ್ಲ್ಯಾಟ್ ಕುಸಿದಿದೆ ಎಂದು ಪೋಲಿಸರು ತಿಳಿಸಿದ್ದಾರೆ.