ಮಠ ಖ್ಯಾತಿಯ ಗುರುಪ್ರಸಾದ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುರುಪ್ರಸಾದ್ ತಮ್ಮ ಮಾದನಾಯಕಹಳ್ಳಿ ಇರೋ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಗುರುಪ್ರಸಾದ್ ಕೋಟ್ಯಾಂತರ ರುಪಾಯಿ ಸಾಲ ಮಾಡಿಕೊಂಡಿದ್ದರು. ಸಾಲದ ಹೊರೆ ತಾಳಲಾರದೆ ಆಗಾಗ ತನ್ನ ಮನೆ ಬದಲಾವಣೆ ಮಾಡುತ್ತಿದ್ದರು. ಇವರ ವಿರುದ್ಧ ಹಲವು ದೂರುಗಳು ಕೂಡ ದಾಖಲಾಗಿದ್ದವು. ರಂಗನಾಯಕ ಸಿನಿಮಾ ಕೂಡ ಸೋತಿತ್ತು. ಈ ಕಾರಣದಿಂದಲೇ ಗುರುಪ್ರಸಾದ್ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ ದುನಿಯಾ ವಿಜಯ್, ಡಾಲಿ ಧನಂಜಯ, ಸತೀಶ್ ನೀನಾಸಂ ಅವರ ನೇತೃತ್ವದಲ್ಲಿ ಗುರುಪ್ರಸಾದ್ ಅಂತ್ಯಸಂಸ್ಕಾರ ನಡೆಯುತ್ತಿದೆ. ಇವರು ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದು, ಎಲ್ಲವನ್ನು ಮುಂದೆ ನಿಂತು ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದಾರೆ.