ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಗಯಾನಕ್ಕೆ ಭೇಟಿ ನೀಡಿದ್ದು, ಈ ಹಿನ್ನೆಲೆ ಅವರಿಗೆ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನವೆಂಬರ್ 19 ರಿಂದ 21 ರವರೆಗೆ ಗಯಾನ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 1968 ರ ನಂತರ ದಕ್ಷಿಣ ಅಮೆರಿಕದ ಗಯಾನಾಗೆ ಭಾರತದ ಪ್ರಧಾನಿ ಭೇಟಿ ನೀಡುತ್ತಿರುವುದು ಇದೇ ಮೊದಲು.
ಪ್ರಧಾನಿ ಮೋದಿ ಎರಡು ದಿನಗಳ ಗಯಾನಾ ಪ್ರವಾಸದ ಅಂಗವಾಗಿ ಇಂದು ಗಯಾನದ ಜಾರ್ಜ್ ಟೌನ್ ಗೆ ಭೇಟಿ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಗಯಾನ ಅಧ್ಯಕ್ಷ ಇರ್ಫಾನ್ ಅಲಿ ಬಿಗಿದಪ್ಪಿ ಅವರನ್ನು ತಮ್ಮ ದೇಶಕ್ಕೆ ಸ್ವಾಗತಿಸಿದರು.
ಬ್ರೆಜಿಲ್ ನಲ್ಲಿ ನಡೆದ ಜಿ 20 ಶೃಂಗ ಸಭೆಯಲ್ಲಿ ಭಾಗಿಯಾದ ಬಳಿಕ ಪ್ರಧಾನಿ ಮೋದಿಯವರು ಇಂದು ಗಯಾನಗೆ ಬಂದಿಳಿದಿದ್ದು, ಈ ಮೂಲಕ 56 ವರ್ಷಗಳ ನಂತರ ಭಾರತದ ಪ್ರಧಾನಿ ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ. ಅಲ್ಲದೇ ಪ್ರಧಾನಿ ಮೋದಿಗೆ ಜಾರ್ಜ್ಟೌನ್ನ ‘ನಗರದ ಕೀ’ ಯನ್ನು ನೀಡಿ ಗೌರವಿಸಲಾಯಿತು.
ಕೆರಿಬಿಯನ್ ನಾಯಕರೊಂದಿಗೆ ಪ್ರಧಾನಿ ಮೋದಿ ಭಾರತ- ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಮೋದಿ ಅವರು ಮೊಹಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನು ಗಯಾನ ಮತ್ತು ಬಾರ್ಬಡೋಸ್ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.