ಮೈಸೂರು ಜಿಲ್ಲೆಯ ಕೆ.ಆರ್ ನಗರದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ ಡಿ ರೇವಣ್ಣ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ. ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣ ರದ್ದು ಕೋರಿದ್ದ ಹೆಚ್.ಡಿ.ರೇವಣ್ಣ ಅರ್ಜಿಯನ್ನು ಇತ್ತೀಚೆಗೆ ಮುಂದೂಡಲಾಗಿತ್ತು. ಕೆ.ಆರ್ ನಗರ ಮಹಿಳೆ ಕಿಡ್ನ್ಯಾಪ್ ಕೇಸ್ನಲ್ಲಿ ರೇವಣ್ಣಗೆ ಜೈಲು ಶಿಕ್ಷೆಯಾಗಿತ್ತು. ಕಿಡ್ನ್ಯಾಪ್ ಸಂತ್ರಸ್ತೆಯ ದೂರಿನ ಮೇಲೆ ರೇವಣ್ಣ ವಿರುದ್ಧ ಕೇಸ್ ದಾಖಲಾಗಿತ್ತು. 10 ದಿನ ಜೈಲು ಅನುಭವಿಸಿ ಹೊರ ಬಂದಿದ್ದಾರೆ.