ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಫ್ಯಾಮಿಲಿ ವೀಕ್ ನಂತರ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಆರಂಭವಾಗಿದೆ. ಫೈನಲ್ಗೆ ಹೋಗಲು ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೇವಲ ಎರಡು ವಾರಗಳು ಮಾತ್ರ ಉಳಿದಿರುವುದರಿಂದ ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಬಿಗ್ಬಾಸ್ ಸೀಸನ್ 11 ಸ್ಪರ್ಧಿ ಹನುಮಂತ ಅವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ . ಇನ್ನೇನು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಮೂರು ವಾರಗಳು ಬಾಕಿ ಇರುವ ಹೊತ್ತಲ್ಲೇ ಟಿಕೆಟ್ ಟು ಫಿನಾಲೆ ಪಾಸ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ ಹಳ್ಳಿ ಹೈದ ಹನುಮಂತ.
ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಹಾಡು ಹಾಡುತ್ತಲ್ಲೇ ಸ್ಪರ್ಧಿಗಳಿಗೆ ಟಾಂಗ್ ಕೊಡುತ್ತಿದ್ದ ಹನುಮಂತ ಈಗ ಮಸ್ತ್ ಆಗಿ ಆಟ ಆಡುವ ಮೂಲಕ ಮತ್ತೆ ದಾಖಲೆ ನಿರ್ಮಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಬಂದ ಹನುಮಂತ ಉತ್ತಮವಾಗಿ ಆಟ ಆಡುತ್ತಿದ್ದರು. ಹನುಮಂತನ ತುಂಟಾಟ, ಟಾಸ್ಕ್ ಆಡುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ. ಬಳಿಕ ಬಿಗ್ಬಾಸ್ಗೆ ಬರುತ್ತಿದ್ದಂತೆ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಇದೀಗ ಮತ್ತೆ ಫಿನಾಲೆ ವಾರದ ಕೊನೆಯಲ್ಲಿ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ವಿಶೇಷ ಹಾಗೂ ಅಚ್ಚರಿ ಎಂದರೆ ಈ ಸೀಸನ್ನ ಅಲ್ಟಿಮೇಟ್ ಕ್ಯಾಪ್ಟನ್ ಹಾಗೂ ಕೊನೆಯ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ ಹನುಮಂತ.
ಬಿಗ್ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್ಗೆ ಭವ್ಯಾ ಗೌಡ, ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಸೆಲೆಕ್ಟ್ ಆಗಿದ್ದರು. ಹೀಗಾಗಿ ಈ ನಾಲ್ಕು ಸ್ಪರ್ಧಿಗಳಿಗೆ ಬಿಗ್ಬಾಸ್ ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಹನುಮಂತ 2 ನಿಮಿಷ 27 ಸೆಕೆಂಡ್ನಲ್ಲಿ ಇದೇ ಟಾಸ್ಕ್ನಲ್ಲಿ ಗೆದ್ದು ಟಿಕೆಟ್ ಟು ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ.
ಜೊತೆಗೆ ಈ ವಾರದ ಕೊನೆಯ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಕೊನೆಯ ಕ್ಷಣದಲ್ಲಿ ಅಂದ್ರೆ ಕೇವಲ 2 ಸೆಕೆಂಡ್ಗಳಲ್ಲೇ ಟು ಫಿನಾಲೆ ಪಾಸ್ ಮಿಸ್ ಮಾಡಿಕೊಂಡಿದ್ದಾರೆ ತ್ರಿವಿಕ್ರಮ್. ಹೌದು, ಮೊದಲು ಈ ಟಾಸ್ಕ್ ಆಡಲು ಭವ್ಯಾ ಗೌಡ ಹೋಗಿದ್ದರು. ಈ ಟಾಸ್ಕ್ ಆಡಲು ಭವ್ಯಾ ಗೌಡ ತೆಗೆದುಕೊಂಡ ಸಮಯ 3 ನಿಮಿಷ 22 ಸೆಕೆಂಡುಗಳು. ಇದಾದ ಬಳಿಕ ರಜತ್ ಟಾಸ್ಕ್ ಆಡಲು ಹೋಗಿದ್ದರು. ಆಗ ರಜತ್ ತೆಗೆದುಕೊಂಡ ಸಮಯ 3 ನಿಮಿಷ 49 ಸೆಕೆಂಡುಗಳು. ಇನ್ನೂ ಇದಾದ ಬಳಿಕ ತ್ರಿವಿಕ್ರಮ್ ಟಾಸ್ಕ್ ಆಡಲು ಹೋಗಿ ತೆಗೆದುಕೊಂಡ ಸಮಯ 2 ನಿಮಿಷ 29 ಸೆಕೆಂಡುಗಳು. ಇನ್ನೂ 2 ಸೆಕೆಂಡ್ಗಳಲ್ಲಿ ಗ್ರ್ಯಾಂಡ್ ಫಿನಾಲೆಗೆ ಹೋಗುವ ಅವಕಾಶವನ್ನು ಮಿಸ್ ಮಾಡಿಕೊಂಡು ಬೇಸರ ಆಗಿದ್ದಾರೆ.