IPL – 2024 ಇದು ಮುಂಬೈ ಇಂಡಿಯನ್ಸ್ ಪಾಲಿಗೆ ಅತ್ಯಂತ ಕೆಟ್ಟ ಟೂರ್ನಿ ಎಂದೇ ಹೇಳಬಹುದು. ಕಾರಣ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ MI ತಂಡ ಅತ್ಯಂತ ಕೆಟ್ಟ ಆಟದ ಪ್ರದರ್ಶನದ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸದ್ಯ ಹಾರ್ದಿಕ್ ಪಾಂಡ್ಯ ಅವರು ಕ್ರಿಕೆಟ್ ಜೀವನದಲ್ಲಿ ಕೆಟ್ಟ ಸಮಯವನ್ನು ಕಳೆಯುತ್ತಿದ್ದಾರೆ ಎಂದೂ ಹೇಳಬಹುದು. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಹಾರ್ದಿಕ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇವೆಲ್ಲದರ ಜೊತೆಗೆ ಪಾಂಡ್ಯಗೆ ಮತ್ತೊಂದು ಆಘಾತ ಉಂಟಾಗಿದೆ.
ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಿವೆ. ಹಾರ್ದಿಕ್ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಶುರುವಾಗಿದೆ. ಹಾರ್ದಿಕ್ ದಂಪತಿ ನಡುವೆ ಮನಸ್ತಾಪವಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರು ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. 2020 ರಲ್ಲಿ ವಿವಾಹವಾದ ಹಾರ್ದಿಕ್-ನತಾಶಾ ಕ್ರಿಕೆಟ್ ಲೋಕದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಜೋಡಿ.
ಹಾರ್ದಿಕ್ ಸಂಸಾರದಲ್ಲಿ ನಿಜವಾಗಲೂ ಬಿರುಕು ಮೂಡಿದಿಯಾ..?
• ಐಪಿಎಲ್ 2024 ರ ಸಂಪೂರ್ಣ ಸೀಸನ್ ನೋಡೊದಾದ್ರೆ ನತಾಶಾ ಯಾವುದೇ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ.
• ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿದ್ದರೂ, ನತಾಶಾ ಒಂದೇ ಒಂದು ಪಂದ್ಯ ವೀಕ್ಷಣೆಗೆ ಬಂದಿಲ್ಲ.
• ಮಾರ್ಚ್ 4 ನತಾಶಾ ಅವರ ಜನ್ಮದಿನ. ಆಗ ಹಾರ್ದಿಕ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲೂ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರಲಿಲ್ಲ.
• ಇದು ಬ್ರೇಕಪ್ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.
• ನತಾಶಾ ತನ್ನ ಇನ್ಸ್ಟಾಗ್ರಾಮ್ ಬಯೋದಿಂದ ಪಾಂಡ್ಯ ಉಪನಾಮವನ್ನು ತೆಗೆದುಹಾಕಿದ್ದಾರೆ.
• ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಜೊತೆಗಿನ ಫೋಟೋಗಳು ಶೇರ್ ಆಗುತ್ತಿಲ್ಲ.
ಹೀಗಾಗಿ ಇವರಿಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಿಲ್ಲ. ಅದೇನೆ ಇರ್ಲಿ ಸಂಸಾರ ಅಂದ ಮೇಲೆ ಒಂದು ಮಾತು ಬರುತ್ತೆ ಹೋಗತ್ತೆ ಈ ಸುಂದರವಾದ ಸಂಸಾರದಲ್ಲಿ ಬಂದಿರೋ ಸಮಸ್ಯೆ ಸರಿ ಹೋಗಿ ಮತ್ತೆ ಈ ಜೋಡಿ ಒಂದಾಗಲಿ ಅನ್ನೋದು ಹಾರ್ದಿಕ್ ಪಾಂಡ್ಯ ಪ್ಯಾನ್ಸ್ ಆಶಯವಾಗಿದೆ.