ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ದಂಪತಿ ನಡುವೆ ಮನಸ್ತಾಪವಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರು ವಿಚ್ಛೇದನ ನೀಡಲಿರುವ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿರಲಿಲ್ಲ. ಆದ್ರೆ ಇದೀಗ ಇದಕ್ಕೆ ಒಂದು ಸುಳಿವು ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಅವರು ನಟಿ ದಿಶಾ ಪಟಾನಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಹಾರ್ದಿಕ್ ಪತ್ನಿ ನತಾಶಾ ಮತ್ತು ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಇಬ್ಬರು ಜೊತೆಯಾಗಿ ಓಡಾಡುತ್ತಿರುವುದು ಕ್ಯಾಮೆರಾಗೆ ಕಾಣಿಸಿದ್ದು, ಇವರಿಬ್ಬರನ್ನು ಕಂಡು ಮಾಧ್ಯಮದವರು ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗೆ ಹಾರ್ದಿಕ್ ಪತ್ನಿ ತಿರಸ್ಕರಿಸಿದ್ದು, ಸುದ್ದಿ ಹಬ್ಬಿಸೋರಿಗೆ ಧನ್ಯವಾದ ಎಂದು ಹೇಳಿದ್ದಾರೆ.