ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ದಂಪತಿಗಳು ಪ್ರತಿದಿನ ಕತ್ರಿನಾ ಅವರನ್ನು ಪೂಜಿಸುತ್ತಾರೆ. ಧನಿ ಫೋಗಟ್ ಗ್ರಾಮದ ನಿವಾಸಿಗಳಾದ ಕರಂಬಿರ್ ಅಲಿಯಾಸ್ ಬಂಟು ಮತ್ತು ಅವರ ಪತ್ನಿ ಸಂತೋಷಿ ಕತ್ರಿನಾ ಕೈಫ್ ಅವರನ್ನು ತಮ್ಮ ದೇವತೆಯಾಗಿ ಪೂಜಿಸುತ್ತಾರೆ.
ನಟಿ ಕತ್ರಿನಾ ಕೈಫ್ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ರಿನಾಗೆ ಅಭಿಮಾನಿಗಳಾಗಿದ್ದಾರೆ. ಅಭಿಮಾನಿಗಳಿಗಾಗಿ ಕತ್ರಿನಾ ಅವರು ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಕತ್ರಿನಾ ತಮ್ಮ 41ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಈ ಮಧ್ಯೆ ಭಾರತದ ಹಳ್ಳಿಯೊಂದರಲ್ಲಿ ದಂಪತಿಯೊಬ್ಬರು ಕಳೆದ 11 ವರ್ಷಗಳಿಂದ ಕತ್ರಿನಾ ಅವರನ್ನು ಪೂಜಿಸುತ್ತಿದ್ದಾರೆ. ನಟಿಯ ಹುಟ್ಟುಹಬ್ಬವನ್ನೂ ಅದ್ದೂರಿಯಾಗಿ ಆಚರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕರಂಬಿರ್ ‘ನಾನು 13-14 ವರ್ಷ ವಯಸ್ಸಿನಿಂದಲೂ ಕತ್ರಿನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇನೆ. ಮದುವೆಗೂ ಮುನ್ನ ಕತ್ರಿನಾ ಹುಟ್ಟುಹಬ್ಬವನ್ನು ಒಬ್ಬನೇ ಆಚರಿಸುತ್ತಿದ್ದೆ. ಈಗ ನನ್ನ ಹೆಂಡತಿ ಮತ್ತು ನಾನು ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಕತ್ರಿನಾ ನನ್ನ ಮನೆಗೆ ಬರಬೇಕೆಂದು ನಾನು ಬಯಸುತ್ತೇನೆ. ಕತ್ರಿನಾ ಖಂಡಿತವಾಗಿಯೂ ನಮ್ಮನ್ನು ಭೇಟಿಯಾಗಲು ಬರುತ್ತಾರೆ ಎಂದು ನನಗೆ ಖಾತ್ರಿಯಿದೆ’ ಎಂದು ಹೇಳಿಕೊಂಡಿದ್ದಾರೆ.