ಹಾಸನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ರಾಜ್ಯ ಕೈ ನಾಯಕರು ಭರ್ಜರಿ ತಯಾರಿ ನಡೆಸಿದ್ದಾರೆ. ಅಹಿಂದ ಹಾಗೂ ಶೋಷಿತ ಸಂಘಟನೆಗಳ ನೇತೃತ್ವದಲ್ಲಿ ಹಾಸನದಲ್ಲಿ ನಡೆಯಬೇಕಿದ್ದ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶಕ್ಕೆ ಜನಕಲ್ಯಾಣ ಸಮಾವೇಶ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೊಸ ಹೆಸರನ್ನಿಟ್ಟು ಘೋಷಣೆ ಮಾಡಿದ್ದಾರೆ.
ಇದೀಗ ಹಾಸನ ಸಮಾವೇಶಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಅಹಿಂದ ಸಮಾವೇಶಕ್ಕೆ ನೊಂದವರ ಟಚ್ ಕೊಟ್ಟಿದ್ದಾರೆ ಡಿಸಿಎಂ ಡಿಕೆಶಿ. ಅಹಿಂದ ಸಮಾವೇಶದ ಮೂಲಕ ಜೆಡಿಎಸ್ ಗೆ ಡಬಲ್ ಶಾಕ್ ಕೊಡಲು ಕೈ ಪಡೆ ಸಜ್ಜಾಗಿದೆ.
ಹಾಸನದಲ್ಲಿ ನಡೆದ ಪ್ರಜ್ವಲ್ ರೇವಣ್ಣ ಕರ್ಮಕಾಂಡವನ್ನೇ ಕಾಂಗ್ರೆಸ್ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸಿದ್ದತೆ ನಡೆಸಿದೆ. ಸಮಾವೇಶಕ್ಕೆ ಪ್ರಜ್ವಲ್ ರೇವಣ್ಣ ಲಿಂಕ್ ಕೊಟ್ಟಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಚುನಾವಣೆಗೂ ಮುನ್ನ ಹಾಸನ ಬಹಳಷ್ಟು ಸುದ್ದಿಯಾಗಿತ್ತು, ಹಾಸನದ ಆ ಘಟನೆ ಬಗ್ಗೆ ಇಡೀ ದೇಶವೇ ಚರ್ಚೆ ನಡೆಸಿತ್ತು, ಆ ಘಟನೆಯಿಂದ ಇಡೀ ರಾಜ್ಯಕ್ಕೆ ಅವಮಾನ ಆಗಿತ್ತು. ಇದು ನೊಂದವರ ಪರ ನಿಲ್ಲುವ ಸಮಾವೇಶ ಎಂದಿದ್ದಾರೆ ಡಿಕೆ ಶಿವಕುಮಾರ್.
ಜೆಡಿಎಸ್ ಗೆ ಮುಜುಗರ ಸೃಷ್ಟಿಸಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ತಣ್ಣಗಾಗಿದ್ದ ಪ್ರಜ್ವಲ್ ವಿಷಯವನ್ನ ಮತ್ತೆ ಕೆದಕಿ, ಚನ್ನಪಟ್ಟಣ ಸೋಲಿನ ಬಳಿಕ ಹಾಸನದಲ್ಲೂ ಡ್ಯಾಮೇಜ್ ಮಾಡಲು ಕೈ ಪಡೆ ರೆಡಿಯಾಗಿದೆ. ಗಾಯಗೊಂಡ ಜೆಡಿಎಸ್ ಗೆ ಶಾಕ್ ಕೊಡ್ತಿರೋ ಬಂಡೆ ಡಿಕೆ ಶಿವಕುಮಾರ್.