ಹಾಸನ : ಈ ಹಿಂದೆ ಕೂಲಿ ಕಾರ್ಮಿಕ ವಸಂತ ಎಂಬುವವರನ್ನು ಬಲಿ ಪಡೆಯುವುದರೊಂದಿಗೆ ಸಾಕಷ್ಟು ಜನರ ಮೇಲೆ ದಾಳಿ ಮಾಡಿದ್ದ ಕರಡಿ ಹೆಸರಿನ ಕಾಡಾನೆ ಕೊನೆಗೂ ಸೆರೆ ಆಗಿದೆ. ಅಭಿಮನ್ಯು ನೇತೃತ್ವದಲ್ಲಿ ಹಂತಕ ಕಾಡಾನೆಯನ್ನು ಬೇಲೂರು ತಾಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆಯ ತಂಡ ಸೆರೆ ಹಿಡಿದಿದೆ. ಅಭಿಮನ್ಯು , ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮ, ಅಶ್ವತ್ಥಾಮ, ಮಹೇಂದ್ರ ಸೇರಿ ಎಂಟು ಆನೆಗಳಿಂದ ಭರ್ಜರಿ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ಕಾಡಾನೆ ಸೆರೆ ಹಿಡಿಯಲಾಗಿದೆ.
ಬೇಲೂರು ತಾಲೂಕಿನ ಮತ್ತಾವರ ಬಳಿ ಜನವರಿ 4 ರಂದು ಕಾರ್ಮಿಕ ವಸಂತ್ನನ್ನು ಕರಡಿ ಕಾಡಾನೆ ಕೊಂದಿತ್ತು. ಬಳಿಕ ಬೇಲೂರು ಸಕಲೇಶಪುರ ಭಾಗದಲ್ಲಿ ಹಲವರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿತ್ತು. ಸದ್ಯ ಹಾಸನದಲ್ಲಿ ಸೆರೆ ಹಿಡಿದ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.