- ಪತ್ನಿಯನ್ನೆ ಇರಿದು ಕೊಂದ ಪೊಲೀಸ್ ಕಾನ್ಸ್ಟೇಬಲ್
- ಹಾಸನದ ಎಸ್ಪಿ ಕಚೇರಿ ಮುಂದೆ ದುರ್ಘಟನೆ
ಕೌಟುಂಬಿಕ ಕಲಹಕ್ಕೆ ದೂರು ನೀಡಲು ಬಂದ ಪತ್ನಿಯನ್ನೇ ಪೊಲೀಸ್ ಕಾನ್ಸ್ಟೇಬಲ್ ಚಾಕುವಿನಿಂದ ಇರಿದು ಕೊಂದ ಘಟನೆ ಹಾಸನದ ಎಸ್ಪಿ ಕಚೇರಿಯ ಮುಂದೆ ನಡೆದಿದೆ. ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಲೋಕನಾಥ್ ತನ್ನ ಪತ್ನಿ ಮಮತಾರನ್ನ ಭೀಕರವಾಗಿ ಕೊಲೆ ಮಾಡಿದ್ದಾನೆ.
ಕಳೆದ 3 – 4 ದಿನಗಳಿಂದ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ದೂರು ಕೊಡಲು ಮಮತಾ ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಕೋಪಗೊಂಡ ಪೇದೆ ಲೊಕನಾಥ್ ತನ್ನ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮಮತಾ ಕೊನೆಯುಸಿರೆಳೆದಿದ್ದಾರೆ. ಪತ್ನಿಯನ್ನು ಹತ್ಯೆ ಮಾಡಿದ ನಂತರ ಪರಾರಿಯಾಗಿದ್ದ ಲೋಕನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ