ಹಾಸನ: ಸಿಎಂ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ) ಹಾಸನದ ಅದಿ ದೇವತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಪೂಜೆಯ ವೇಳೆ ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಮೂಲಕ ಸಿಎಂ ಅರ್ಚನೆ ಮಾಡಿಸಿದ್ದಾರೆ. ಹಾಸನಾಂಬೆ ದೇವಿ ದರ್ಶನ ಪಡೆಯುವಾಗ ಅಷ್ಟೋತ್ತರದಿಂದ ಪೂಜೆ ಮಾಡುವುದು ವಾಡಿಕೆ. ಈ ಬಾರಿ ಖಡ್ಗಮಾಲಾ ಸ್ತೋತ್ರದ ಮೂಲಕ ದೇವಿಯನ್ನು ಅರ್ಚಿಸಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ಸಿಎಂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಸನಾಂಬೆಯ ಜಾತ್ರೆ ನಡೆಯುತ್ತಿದೆ ನೀವು ಬರಬೇಕು ಎಂದಿದ್ದರು. ಹಾಗಾಗಿ ನಾನು ಬಂದು ದೇವಿಯ ಆಶೀರ್ವಾದ ಪಡೆದೆ. ಹಾಸನಾಂಬೆ ಬಹಳ ಇತಿಹಾಸವುಳ್ಳ ದೇವಿ. ಈ ಬಾರಿ ರಾಜಣ್ಣ ನೇತೃತ್ವದಲ್ಲಿ ಜಾತ್ರೆ ಬಹಳ ಅಚ್ಚು ಕಟ್ಟಾಗಿ ನಡೆಯುತ್ತಿದೆ ಎಂದರು.
ಇದನ್ನು ಓದಿ: Bigg Boss ಮನೆಯಿಂದ ನಟಿ ಹಂಸ ಔಟ್!
ಕೇಂದ್ರದಿಂದ ಬರ ಪರಿಹಾರ ಬರುವ ಬಗ್ಗೆ ಮಾತನಾಡಿದ ಸಿಎಂ, ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಹೋಗಿ 20 ದಿನ ಕಳೆಯಿತು. ಅವರು ವರದಿ ಕೊಟ್ಟರೂ ಕೇಂದ್ರ ಸರ್ಕಾರ ಗೈಡ್ ಲೈನ್ ಪ್ರಕಾರ ಹಣ ಬಿಡುಗಡೆ ಮಾಡಿಲ್ಲ. ನಾವು ಎನ್ಡಿಆರ್ಎಫ್ ನಿಯಮದಡಿ 17,900 ಕೋಟಿ ರೂಪಾಯಿ ಹಣ ಕೇಳಿದ್ದೇವೆ. ನಮ್ಮ ರಾಜ್ಯದಿಂದ ಲಕ್ಷ ಲಕ್ಷ ತೆರಿಗೆ ಕೇಂದ್ರಕ್ಕೆ ಸಂದಾಯವಾಗಿದೆ. ಹಾಗಾಗಿ ನಮ್ಮ ಹಣ ನಾವು ಕೇಳಿದ್ದೇವೆ ಎಂದರು.
ಇದನ್ನು ಓದಿ: ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ 10 ಕೋಟಿ: DCM ಆದೇಶ!
ನಾವು ಕೇಂದ್ರದೊಂದಿಗೆ ಜಗಳ ಮಾಡ್ತಿಲ್ಲ. ನಮ್ಮ ಸಚಿವರು ಹೋಗಿ ಕೇಂದ್ರ ಸಚಿವರನ್ನು ಭೇಟಿಯಾಗೋಣ ಎಂದರೆ ಅವರ ಸಮಯ ಕೊಡುತ್ತಿಲ್ಲ. ವಿಪಕ್ಷದವರು ನಾವು ಜಗಳ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ನಾವೇನು ಮಾಡ್ಲಿ. ಹಾಸನಾಂಬೆ ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ಹೇಳಿದರು.