ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಸತ್ಸಂಗದಲ್ಲಿ ನಡೆದ ಭಾರೀ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ್ದರು ಹಾಗೂ ಇನ್ನೂ ಹಲವು ಜನರು ಗಾಯಗೊಂಡಿದ್ದರು. ಎರಡು ದಿನಗಳ ಬಳಿಕ ಯುಪಿ ಪೊಲೀಸರು ಬೋಧಕ ಭೋಲೆ ಬಾಬಾ ಅವರ ಸಂಘಟನಾ ಸಮಿತಿಯ ಆರು ಸದಸ್ಯರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಎಲ್ಲಾ ಆರು ಜನರು ಸತ್ಸಂಗದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು ಎಂದು ಹೇಳಲಾಗಿದೆ.
ಹತ್ರಾಸ್ ನ ಕಾಲ್ತುಳಿತ ಪ್ರಕರಣಕ್ಕೆ ಸಂಬಂದಪಟ್ಟಂತೆ ಇಂದು ಬೆಳಗ್ಗೆ ಸರಿಸುಮಾರು 7;15 ರ ವೇಳೆಗೆ ರಾಹುಲ್ ಗಾಂಧಿ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆ. ಸಂತ್ರಸ್ತರ ಕುಟುಂಬದ ಜೊತೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿ, ಅವರ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ.
ಬೇಟಿ ನೀಡಿದ ರಾಹುಲ್ ಗಾಂಧೀ ಸಂತ್ರಸ್ತರ ಬಗ್ಗೆ ಹಾಗು ನಡೆದ ಘಟನೆ ಬಗ್ಗೆ ಮಾತನಾಡುತ್ತಾ ಇದು ಒಂದು ದುಃಖಕರ ಘಟನೆ. ಹಲವು ಮಂದಿ ಸಾವನ್ನಪ್ಪಿದ್ದಾರೆ.ಈ ಬಗ್ಗೆ ನಾನು ರಾಜಕೀಯವಾಗಿ ಏನು ಹೇಳುವುದಿಲ್ಲ. ಇಲ್ಲಿನ ಆಡಳಿತ ವರ್ಗದಿಂದ ಲೋಪವಾಗಿದೆ. ಮೃತರ ಕುಟುಂಬದವರು ಕಡುಬಡವರಾಗಿರುವುದರಿಂದ ಗರಿಷ್ಟ ಪರಿಹಾರ ಬಹಳ ಅತ್ಯಗತ್ಯ. ಹೃದಯ ತೆರೆದು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಕೊಡಲು ಸಿ ಎಂ ಗೆ ಮನವಿ ಮಾಡಿಕೊಳ್ಳುತ್ತೇನೆ. ಮೃತರ ಕುಟುಂಬದವರ ಜೊತೆ ನಾನು ಮಾತನಾಡಿದ್ದೇನೆ . ಪರಿಹಾರ ವಿಳಂಬವಾದರೆ ಅವರಿಗೆ ಏನು ಪ್ರಯೋಜನವಾಗುವುದಿಲ್ಲ . ಅದರಿಂದ ಮೃತರ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ನೀಡುವಂತೆ ಒತ್ತಾಯ ಮಾಡುತ್ತೇನೆ. ನಾನು ವಿಚಾರಿಸಿದ ಪ್ರಕಾರ ತತ್ಸಂಗ್ ನಲ್ಲಿ ಆ ಘಟನೆ ನಡೆಯುವ ವೇಳೆ ಪೋಲಿಸ್ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ. ತಾಯಿ ಕಳೆದುಕೊಂಡ ಖುಷ್ಬೂ ಎಂಬ ಬಾಲಕಿಗೆ ಸಹಾಯ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.