ಅನಾರೋಗ್ಯದಿಂದ ಬಳಲುತ್ತಿರೋ ನಟ ಶಿವರಾಜ್ ಕುಮಾರ್ ಅವರ ಅಮೆರಿಕಾ ಪ್ರವಾಸ 2 ದಿನ ಪೋಸ್ಟ್ಪೋನ್ ಆಗಿದೆ. ಭೈರತಿ ರಣಗಲ್ ಚಿತ್ರದ ಪ್ರಮೋಷನ್ಸ್ ಮುಗಿಸಿದ್ದ ಶಿವಣ್ಣ ಚಿಕಿತ್ಸೆಗಾಗಿ ಅಮೆರಿಕಾಗೆ ಇಂದು ತೆರಳಬೇಕಿತ್ತು. ಅಮೆರಿಕಾದಲ್ಲಿ ಸರ್ಜರಿ ಮಾಡಿಸಿಕೊಳ್ಳಲು ಶಿವಣ್ಣ ಸಖಲ ಸಿದ್ದತೆ ನಡೆಸಿದ್ದರು. ಆಧರೆ ಡಿಸೆಂಬರ್ 16 ಅಂದರೆ ಇವತ್ತಿನ ಬದಲಿಗೆ ಮತ್ತೆರಡು ದಿನ ಪೋಸ್ಟ್ ಪೋನ್ ಮಾಡಿದ್ದಾರೆ. ಡಿಸೆಂಬರ್ 18ಕ್ಕೆ ಫ್ಲೈಟ್ ಹತ್ತಲಿದ್ದಾರೆ ಶಿವರಾಜ್ ಕುಮಾರ್ ಅವರು.
ಇಷ್ಟಕ್ಕೂ ಶಿವಣ್ಣ ಅವರ ಅಮೆರಿಕಾ ಪಯಣ 2 ದಿನ ಪೋಸ್ಟ್ ಪೋನ್ ಆಗಿದ್ಯಾಕೆ? ಎಂಬುದರ ಮಾಹಿತಿಯನ್ನ ನಿಮ್ಮ ಗ್ಯಾರಂಟಿ ನ್ಯೂಸ್ ಬಿಚ್ಚಿಡುತ್ತಿದೆ. ಇದು ಗ್ಯಾರಂಟಿ ನ್ಯೂಸ್ ಗೆ EXCLUSIVE ಮಾಹಿತಿಯಾಗಿದೆ. ಇಂದು ಸಂಜೆ ಉಪೇಂದ್ರ ಅವರು ನಟಿಸಿ ನಿರ್ದೇಶಿಸಿರುವ UI ಚಿತ್ರದ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನ ಖಾಸಗಿ ಪಂಚತಾರಾ ಹೋಟೆಲ್ ನಲ್ಲಿ ಜರುಗಲಿದೆ. ಈ ಇವೆಂಟ್ಗೆ ಮುಖ್ಯ ಅತಿಥಿಯಾಗಿ ಶಿವಣ್ಣ ಆಗಮಿಸಲಿದ್ದಾರೆ. ಉಪೇಂದ್ರ & ನಿರ್ಮಾಪಕ ಕೆಪಿ ಶ್ರೀಕಾಂತ್ ಗಾಗಿ ಶಿವಣ್ಣ ಈ ಒಂದು ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಅಲ್ಲದೆ.. ಕನಕಪುರ ಫಾರ್ಮ್ ಹೌಸ್ ನಲ್ಲಿ ವಿಶೇಷ ಹೋಮ ಮಾಡಿಸಲು ಶಿವರಾಜ್ ಕುಮಾರ್ ದಂಪತಿ ಮುಂದಾಗಿದ್ದಾರೆ. ಡಾ. ರಾಜ್ ಕುಮಾರ್ ಇದ್ದಾಗ ಮಾಡಿಸುತ್ತಿದ್ದ ವಿಶೇಷ ಹೋಮವನ್ನ ಮಾಡಿಸಲು ಶಿವಣ್ಣ ಪ್ಲಾನ್ ಮಾಡಿದ್ದಾರೆ. ಹೀಗಾಗಿ UI ಇವೆಂಟ್ & ಹೋಮ ಮುಗಿಸಿ ಡಿ.18ಕ್ಕೆ ಅಮೆರಿಕಾ ಪಯಣ ಬೆಳೆಸಲಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ.