ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಗಾಜನೂರಿಗೆ ಹೋಗಿ ಅಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ. ಅಲ್ಲಿ ತಮ್ಮ ಸಂಬಂಧಿಗಳನ್ನು ಭೇಟಿಯಾಗಿದ್ದಾರೆ.
ಶಿವರಾಜ್ ಕುಮಾರ್ ಅವರು ನಗರದ ಜಂಜಾಟಗಳಿಂದ ದೂರಾಗಿ ತಮ್ಮ ಮೂಲ ಊರಾದ ಗಾಜನೂರಿಗೆ ಹೋಗಿ ಅಲ್ಲಿ ದೀಪಾವಳಿ ಆಚರಣೆ ಮಾಡಿರುವುದು ವಿಶೇಷ. ಗಾಜನೂರಿನ ಹಳೆಯ ಮನೆಯಲ್ಲಿರುವ ತಮ್ಮ ಅಪ್ಪಾಜಿಯವರ ಚಿತ್ರಗಳು, ಚಿಕ್ಕಪ್ಪನ ಚಿತ್ರಗಳು. ತಾತನ ಚಿತ್ರಗಳು ಎಲ್ಲವನ್ನೂ ನೋಡಿ ಖುಷಿ ಪಟ್ಟಿದ್ದಾರೆ.
ಗಾಜನೂರಿಗೆ ಹೋಗಿ ಅಲ್ಲ ಅಣ್ಣವ್ರ ತಂಗಿ ನಾಗಮ್ಮ ಅವರನ್ನ ಭೇಟಿ ಮಾಡಿ, ಮಾತನಾಡಿದ್ದಾರೆ. ಅವರನ್ನು ಅಪ್ಪಿಕೊಂಡು ಅವರಿಂದ ಆಶೀರ್ವಾದ ಪಡೆದಿದ್ದಾರೆ. ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ.
ಗಾಜನೂರಿನಲ್ಲಿ ತಮ್ಮ ಕೆಲವು ಹಳೆ ಗೆಳೆಯರನ್ನು ಸಹ ಭೇಟಿ ಆಗಿದ್ದಾರೆ. ತಮ್ಮ ಸಂಬಂಧಿಗಳನ್ನು, ಅವರ ಮಕ್ಕಳನ್ನು ಸಹ ಭೇಟಿ ಆಗಿದ್ದಾರೆ ಶಿವಣ್ಣ.