ಹಾವೇರಿ: ಭಾರತ ದೇಶ ಹಾಗೂ ಹಿಂದೂ ಧರ್ಮ ಸುರಕ್ಷಿತವಾಗಿ ಇರಬೇಕೆಂದರೆ, ಜಾತಿ, ಮತ ಎನ್ನದೇ ಹಿಂದೂಗಳೆಲ್ಲ ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮತ ನೀಡುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಎನ್ ಎಂ ತಡಸ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ಭರತ್ ಬೊಮ್ಮಾಯಿ ಯುವಕ, ಸಾಧು ಮನುಷ್ಯ, ನಮ್ಮ ಪಕ್ಷದ ಕೇಂದ್ರದ ಹಿರಿಯರು ಭರತ್ ಬೊಮ್ಮಾಯಿಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದನ್ನು ನೋಡಿದ್ದೀರಿ, ಲೋಕಸಭೆ ಚುನಾವಣೆಯಲ್ಲಿ ಕೇವಲ ಐವತ್ತು ಆರವತ್ತು ಸೀಟು ಕಡಿಮೆ ಆಗಿದ್ದರಿಂದ ಒಂದು ಕಾಯ್ದೆ ತಿದ್ದುಪಡಿ ಮಾಡಲು ಕಷ್ಟ ಆಗಿದೆ. ನಾವು ಅವರನ್ನು ಅಣ್ಣ ತಮ್ಮಂದಿರು ಎಂದು ತಿಳಿದುಕೊಂಡಿದ್ದೇವೆ. ಆದರೆ, ಅವರ ಧರ್ಮದಲ್ಲಿ ಬೇರೆ ಧರ್ಮದವರನ್ನು ಅಣ್ಣ ತಮ್ಮ ಎನ್ನುವ ಮಾತೇ ಇಲ್ಲ. 2019 ರಲ್ಲಿ ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ನಮ್ಮ ದೇಶದಲ್ಲಿ ಎಷ್ಡು ವಕ್ಪ್ ಆಸ್ತಿ ಇದೆ ಎಂದು ಕೇಳಿದ್ದರು. ಆಗ ಐದು ಲಕ್ಷ ಎಕರೆ ಎಂದು ಹೇಳಿದರು.
ಇದನ್ನು ಓದಿ:ಬಿಗಿಯಾಗಿ ಸೀರೆ ಉಡುವ ಮಹಿಳೆಯರಿಗೆ ಪೆಟ್ಟಿಕೋಟ್ ಕ್ಯಾನ್ಸರ್ ವಾರ್ನಿಂಗ್!
ಈಗ ಸುಮಾರು ಒಂಭತ್ತುವರೆ ಲಕ್ಷ ಎಕರೆ ವಕ್ಪ್ ಆಸ್ತಿ ಇದೆಯಂತೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಂಸದರ ಒತ್ತಡದಿಂದ ವಕ್ಪ್ ಕಾಯ್ದೆ ತಿದ್ದುಪಡಿ ಮಾಡಲು ಸಂಸತ್ತಿನ ಜಂಟಿ ಸದನ ಸಮಿತಿ ರಚನೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ 8ಲಕ್ಷ ಎಕರೆ ಐತಿ, ಭಾರತದಲ್ಲಿ 9.5 ಲಕ್ಷ ಎಕರೆ ವಕ್ಪ್ ಆಸ್ತಿ ಇದೆ. ಕಾಂಗ್ರೆಸ್ ನವರು ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿಗ್ಗಾವಿ ಸವಣೂರಿನಲ್ಲಿ ನವಾಬರು ಇದ್ದರು ನಿಮ್ಮ ಎಲ್ಲ ಆಸ್ತಿಗಳು ವಕ್ಪ್ ಆಸ್ತಿಯಾಗುತ್ತವೆ. ನೀವೆಲ್ಲ ಜಾತಿ ಒಳ ಪಂಗಡ ಬಿಟ್ಟು ಒಕ್ಕಟ್ಟಾಗಿ ಇಲ್ಲದಿದ್ದರೆ ನಿಮ್ ಎಲ್ಲ ಆಸ್ತಿಗಳೂ ವಕ್ಪ್ ಆಸ್ತಿ ಆಗುತ್ತವೆ. ನಮ್ಮ ಪಂಚಮಸಾಲಿ ಸಮುದಾಯಕ್ಕೆ ಬಸವರಾಜ ಬೊಮ್ಮಾಯಿ 2 ಡಿ ಮೀಸಲಾತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಅದನ್ನು ಜಾರಿ ಮಾಡುತ್ತಿಲ್ಲ. ಮೀಸಲಾತಿ ನೀಡುವಂತೆ ನಾವು ಡಿಸೆಂಬರ್ ನಲ್ಲಿ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ಸಮೇತ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಇದನ್ನು ಓದಿ:ಪಂದ್ಯದ ಮಧ್ಯೆಯೇ ಮೈದಾನದಿಂದ ಹೊರನಡೆದ ಬೌಲರ್ ಅಮಾನತು!
ತಾತ್ಕಾಲಿಕ ಸುಖಕ್ಕೆ ಕಾಂಗ್ರೆಸ್ ಗೆ ಮತ ಹಾಕಿದರೆ ಸಾಬರ ಕೈಯಲ್ಲಿ ಕೆಲಸಕ್ಕೆ ಹೋಗಬೇಕಾಗುತ್ತದೆ. ಇಲ್ಲ ಮುಸ್ಲೀಮರಾಗಬೇಕಾಗುತ್ತದೆ. ಸಿದ್ದರಾಮಯ್ಯ ಅವರು ಜಮೀರ್ ಅವರಿಗೆ ಎಲ್ಲ ವಕ್ಪ್ ಆಸ್ತಿ ಸಮೀಕ್ಷೆ ಮಾಡಲು ಹೇಳಿದ್ದರು. ಭಾರತ ದೇಶ ಉಳಿಯಬೇಕೆಂದರೆ ಹಿಂದು ಧರ್ಮ ಉಳಿಯಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಕಾಂಗ್ರೆಸ್ ನವರು ಎಸ್ಸಿ ಎಸ್ಟಿ ಸಮುದಾಯಕ್ಕೂ ಏನೂ ಮಾಡಿಲ್ಲ. ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದ್ದರು ಅವರು ನಿಧನ ಹೊಂದಿದರೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಅವರು ಭಾರತ ಇಬ್ಬಾಗ ಆಗುವುದನ್ನು ವಿರೋಧಿಸಿದ್ದರು. ಭಾರತದಲ್ಲಿರುವ ಮುಸ್ಲೀಮರು ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದಲ್ಲಿರುವ ಮುಸ್ಲೀಮರು ಭಾರತಕ್ಕೆ ಬರಲಿ ಎಂದು ಹೇಳಿದ್ದರು. ಆದರೆ, ನೆಹರು ಜಿನ್ನಾ ಕುತಂತ್ರದಿಂದ ದೇಶ ಇಬ್ಬಾಗವಾಯಿತು ಎಂದರು.
ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಮುನ್ನೂರು ಸ್ಥಾನ ಕೊಟ್ಡಿದ್ದರೆ, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಂತೆ, ವಕ್ಪ್ ಕಾಯಿದೆ ತಿದ್ದುಪಡಿ ಮಾಡಲು ಅನುಕೂಲವಾಗುತ್ತಿತ್ತು. ಸಂವಿಧಾನದ 370 ಕಾಯ್ದೆ ಜಾರಿ ಇದ್ದಾಗ ಜಮ್ಮು ಕಾಶ್ಮೀರದಲ್ಲಿ ಯಾವುದೇ ಮೀಸಲಾತಿ ಅವಕಾಶ ಇರಲಿಲ್ಲ. 370 ರದ್ದಾದ ಮೇಲೆ ಐದು ಜನ ದಲಿತರು ವಿಧಾನಸಭೆ ಪ್ರವೇಶಿಸುವಂತೆ ಆಯಿತು. ಈಗ ಗ್ರಾಮ ಪಂಚಾಯತಿಗಿಂದ ಹಿಡಿದು ಎಲ್ಲ ಹಂತದಲ್ಲೂ ದಲಿತರಿಗೆ ಮೀಸಲಾತಿ ದೊರೆಯುವಂತಾಗಿದೆ ಎಂದರು.
ಇದನ್ನು ಓದಿ:ನಂದಮೂರಿ ಬಾಲಕೃಷ್ಣ ಟಾಕ್ ಶೋನಲ್ಲಿ ಬರ್ತಿದ್ದಾರೆ ಐಕಾನಿಕ್ ಸ್ಟಾರ್!
ರಾಜ್ಯ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಲೋಪಗಳನ್ನು ಅಂಕಿ ಅಂಶಗಳ ಸಮೇತ ವಾದ ಮಾಡಿ ಬಸವರಾಜ ಬೊಮ್ಮಾಯಿಯವರು ಒಬ್ಬರೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಅವರು ಸಂಸದರಾಗಿ ದೆಹಲಿಗೆ ಹೋಗಿದ್ದಾರೆ. ನಾನು ನೇರವಾಗಿ ಮಾತನಾಡುತ್ತೇನೆ. ಅದು ಎಲ್ಲಿ ಬಳಕೆಯಾಗಬೇಕೊ ಅಲ್ಲಿ ಬಳಕೆಯಾಗುತ್ತದೆ ಎಂದು ಹೇಳಿದರು. ಈ ಸರ್ಕಾರ ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರೂನದಲ್ಲಿ 90 ಕೋಟಿ ರೂಪಾಯಿ ಹೊಡೆದರು. ಅದನ್ನು ಸಿಎಂ ಒಪ್ಪಿಕೊಂಡಿದ್ದಾರೆ. ಅದನ್ನು ಬಳ್ಳಾರಿ, ರಾಯಚೂರು ಎಲೆಕ್ಷ್ಯನ್ ಗೆ ಹಂಚಿದ್ದರು. ಅಷ್ಟು ದುಡ್ಡು ವಾಲ್ಮೀಕಿ ಸಮುದಾಯದವರಿಗೆ ಹಂಚಿದ್ದರೆ 18 ಸಾವಿರ ಕುಟುಂಬಕ್ಕೆ ಹಂಚಬಹುದಿತ್ತು ಎಂದರು.
ಸಚಿವ ಜಮೀರ ಅಹಮದ್ ಮುಸ್ಲೀಮರಿಗೆ ಗೋರಿ ತೋರಿಸಿ ವಕ್ಪ್ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲೀಂ ಆಗಿ ಹುಟ್ಟುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಈಗಲೇ ಎಲ್ಲ ಆಸ್ತಿಯನ್ನು ವಕ್ಪ್ ಆಸ್ತಿ ಮಾಡುತ್ತಿದ್ದಾರೆ. ಹಾಲುಮತದ ಸಮುದಾಯದ ಉತ್ತರ ಕರ್ನಾಟಕದಲ್ಲಿ ಅತ್ಯಂತ ಶ್ರೇಷ್ಟ ಸಮುದಾಯ, ನಾವು ಯಾವುದೇ ಶುಭ ಕಾರ್ಯ ಮಾಡಲು ಹಾಲುಮತದವರಿಂದ ಪೂಜೆ ಮಾಡಿಸುತ್ತೇವೆ. ಅಂತಹ ಶ್ರೇಷ್ಠ ಸಮುದಾಯದಲ್ಲಿ ಹುಟ್ಟಿದ ಸಿದ್ದರಾಮಯ್ಯ ಆ ಸಮುದಾಯಕ್ಕೆ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿ:ನಟ ‘ಹರೀಶ್ ರಾಯ್” ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!
ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹದಿನೇಳು ಕೇಸ್ ಇದ್ದಾವೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೈಲ್ವಾನ್ ನನ್ನು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಅವರೊಂದಿಗೆ ಕುಸ್ತಿ ಹಿಡೊಯಬೇಕಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಲ್ಲಿ ಒಳ್ಳೆಯ ಮುಸ್ಲಿಮರಿಗೂ ಅವಕಾಶವಿಲ್ಲ. ನಾನು ಮುಸ್ಲೀಮರ ವಿರುದ್ದ ಮಾತನಾಡುತ್ತೇನೆ ಎಂದು ನನ್ನ ವಿರುದ್ದ ಕೇಸ್ ಹಾಕುತ್ತಾರೆ. ನಾನು ಪ್ರತಾಪ್ ಸಿಂಹ, ಸಿ.ಟಿ ರವಿ, ಸೂಲಿಬೆಲೆ ಮೇಲೆ ಕೇಸ್ ಹಾಕುತ್ತಿದ್ದಾರೆ. ಈಗ ಬೊಮ್ಮಾಯಿ ಮೇಲೂ ಕೇಸ್ ಹಾಕಿದ್ದಾರೆ ಎಂದರು.
ಎಲ್ಲ ಹಿಂದೂಗಳು ಮತದಾನದ ದಿನ ಬೆಳಿಗ್ಗೆ ಆರು ಗಂಟೆಗೆ ಬೂತ್ ಗೆ ಹೋಗಿ ಓಟಿಂಗ್ ಮಾಡಬೇಕು. ನೀವು ಓಟ್ ಹಾಕುವುದನ್ನು ಮಾತ್ರ ಮಾಡಿ, ಯಾರನ್ನು ಎಲ್ಲಿ ಇಡಬೇಕು ಎಂದು ನೋಡಿಕೊಳ್ಳಲು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಅವರು ಬಂದ ಮೇಲೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ರಾಮ ಮಂದಿರ ನಿರ್ಮಾಣ ಆಗಿದೆ ಭಾರತ ಐದನೇ ದೊಡ್ಡ ಆರ್ಥಿಕ ಶಕ್ತಿ ಆಗಲು ಕಾರಣವಾಗಿದೆ ಎಂದರು.
ಇದನ್ನು ಓದಿ:ಚನ್ನಪಟ್ಟಣದಲ್ಲಿ ವಿಠ್ಠಲೇನಹಳ್ಳಿ ಗೋಲಿಬಾರ್ ನೆನಪಿಸಿದ ದೇವೇಗೌಡ
ಬಿಜಾಪುರದ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಅವರ ಕೊಡುಗೆ ಇದೆ. ಅವರ ಅಭಿವೃದ್ಧಿ ಕೆಲಸವನ್ನು ನೆನೆಸುತ್ತೇನೆ. ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿದ್ದಾರೆ. ಭರತ್ ಬೊಮ್ಮಾಯಿಯನ್ನು ಐವತ್ತು ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹಾಜರಿದ್ದರು.