ಹಾವೇರಿ: ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರ ಮಾಡಿ ಮಾತನಾಡಿದರು. ಶಿಗ್ಗಾವಿ ಯಲ್ಲಿ ಯುವಕರ ಬೆಂಬಲ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಅಭಿವೃದ್ಧಿ ಮುಂದುವರೆಯಬೇಕೆಂಬ ಬಯಕೆ ಜನರಿಗಿದೆ. ಹೀಗಾಗಿ ಭರತ್ ಬೊಮ್ಮಾಯಿ ಹೆಚ್ಚಿನ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು.
ಇದನ್ನು ಓದಿ: ಗಂಭೀರ್ ಅನುಭವವನ್ನು ಪ್ರಶ್ನಿಸುತ್ತಿದೆ ಭಾರತ ತಂಡದ ಸೋಲು!
ನಾವೆಲ್ಲರೂ ಒಟ್ಟಾಗಿ ಚುನಾವಣೆಗೆ ಬಂದಿದ್ದೇವೆ. ಇದು ಹೊಸ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ಯಾವಾಗ ಪ್ರಧಾನಿ ಮೋದಿಯವರು ವಕ್ಪ್ ಕಾಯಿದೆ ತಿದ್ದುಪಡಿ ಮಾಡಲು ಮುಂದಾದರೋ ವಕ್ಪ್ ನವರು ರೈತರ ಲಕ್ಷಾಂತರ ಎಕರೆ ಜಮಿನಿಗೆ ವಕ್ಪ್ ಆಸ್ತಿ ಮಾಡಲು ಹೊರಟಿದ್ದಾರೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ಅಭಿವೃದ್ಧಿಯಾಗಿದೆ ಸಿದ್ದರಾಮಯ್ಯ ಸರ್ಕಾರ ಬಂದಾಗ ಯಾವುದೇ ಅಭಿವೃದ್ಧಿ ಮಾಡದೆ ಲೂಟಿ ಮಾಡುತ್ತಿದ್ದಾರೆ. ಅವರು ಅಧಿಕಾರದ ಕೊನೆಯಲ್ಲಿದ್ದಾರೆ. ಅವರು ಜೆಸಿಬಿ ಹಚ್ಚಿ ದೋಚುತ್ತಿದ್ದಾರೆ ಎಂದರು.
ಇದನ್ನು ಓದಿ: ಮೆಜೆಸ್ಟಿಕ್ ಬಸ್ ನಿಲ್ದಾಣ ಸಹ ವಕ್ಫ್ ಆಸ್ತಿ: ಪ್ರಲ್ಹಾದ್ ಜೋಶಿ
ಬೆಳಗಾವಿಯಲ್ಲಿ ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡರು, ಸರ್ಕಾರಿ ನೌಕರರೂ ನೆಮ್ಮದಿಯಿಂದ ಬದುಕುತ್ತಿಲ್ಲ. ಸಿಎಂ ಹೆಂಡತಿ ಹೆಸರಿನಲ್ಲಿ ಸೈಟ್ ಪಡೆದಿದ್ದಾರೆ. ಸಿಎಂ ರಾಜಿನಾಮೆ ಕೊಟ್ಟು ತನಿಖೆ ಎದುರಿಸಬೇಕು. ಈ ಚುನಾವಣೆಯಲ್ಲಿ ತುಷ್ಟೀಕರಣ ನೀತಿಗೆ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಉತ್ತರ ಕೊಡಬೇಕು ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆದ ಮೇಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದರು. ಗ್ರಾಮ ಸಡಕ್ ಯೋಜನೆ ಜಾರಿಗೆ ತಂದು ಪ್ರತಿ ಹಳ್ಳಿಗೂ ರಸ್ತೆ ನಿರ್ಮಾಣ ಮಾಡಿದರು. ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಸುಪರ್ ಪಾವರ್ ದೇಶ ಎಂದು ಹೇಳಿದ್ದಾರೆ. ಇದು ಮೋದಿಯವರ ನಾಯಕತ್ವಕ್ಕೆ ಸಿಕ್ಕ ಗೌರವ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನು ಓದಿ: ಅದೃಷ್ಟದ ಕಾರ್ಗೆ ಸಮಾಧಿ ನಿರ್ಮಿಸಿದ ಮಾಲೀಕ!
ರಾಜ್ಯದಲ್ಲಿ ಬೊಮ್ಮಾಯಿಯವರು ಶಾಸಕರಾಗಿ, ಸಚಿವರಾಗಿ ಸಿಎಂ ಆಗಿ ನೀರಾವರಿ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಶಿಗ್ಗಾವಿ ಯಲ್ಲಿ ಪ್ರತಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಮಾಡಿಸಿದ್ದಾರೆ. ಭರತ್ ಬೊಮ್ಮಾಯಿಯನ್ಬು ಗೆಲ್ಲಿಸುವ ಮೂಲಕ ಅಭಿವೃದ್ಧಿ ಮುಂದುವರೆಕೆಗೆ ಜನರು ಮತಹಾಕುವಂತೆ ಮನವಿ ಮಾಡಿದರು.