ಹಾವೇರಿ: ಯುವನಾಯಕನಾಗಿ ಹಗಲು ರಾತ್ರಿ ಎಲ್ಲಾ ಸಮುದಾಯಗಳ ಸಾಮಾಜಿಕ ನ್ಯಾಯ, ಅಭಿವೃದ್ಧಿಗೆ ಜನರ ಸೇವೆಗೆ ದುಡಿಯುವುದಾಗಿ ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆ ರೋಡ್ ಷೋ ನಡೆಸಿ, ಮತದಾರರನ್ನುದ್ದೇಶಿಸಿ ಮಾತನಾಡಿದರು. 2008ಕ್ಕಿಂತ ಮೊದಲು ಶಿಗ್ಗಾವಿ ಹಿಂದುಳಿದ ತಾಲೂಕಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಇದು ಮಾದರಿ ಕ್ಷೇತ್ರವಾಯಿತು. ಕಳೆದು ಹದಿನೈದು ವರ್ಷಗಳಿಂದ ಕ್ಷೇತ್ರದಲ್ಲಿ ಗಲಭೆಗಳಾಗಿರಲಿಲ್ಲ. ತಂದೆಯವರು ಈಗ ಸಂಸದರಾಗಿ ಗೆದ್ದು ಹೋದ ಬಳಿಕ ಕ್ಷೇತ್ರದಲ್ಲಿ ಎರಡ್ಮೂರು ತಿಂಗಳ ಗ್ಯಾಪಲ್ಲಿ ಪೊಲೀಸ್ ರಾಜಕಾರಣ ನಡೆಯುತ್ತಿದೆ. ಆದರೆ, ತಂದೆಯವರಾಗಲೀ ನಾನಾಗಲೀ ಇರುವವರೆಗೂ ಕ್ಷೇತ್ರದಲ್ಲಿ ಪೊಲೀಸ್ ರಾಜಕಾರಣ ನಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ತಿಲಕ್, ಸೋನು ನಟನೆಯ ‘ಟೆನೆಂಟ್’ ಟ್ರೈಲರ್ ರಿಲೀಸ್..!
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದ ಕೃಷಿ ಸಮ್ಮಾನ್ ಯೋಜನೆ ಜೊತೆಗೆ ರಾಜ್ಯದ ರೈತರಿಗೆ ನಾಲ್ಕು ಸಾವಿರ ರೂಪಾಯಿ ನೀಡಿದ್ದು, ಅದನ್ನು ತಂದೆಯವರು ಮುಂದುವರೆಸಿದರು. ನಮ್ಮ ತಂದೆಯವರು ರೈತರಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದರು. ಆದರೆ, ಈಗಿರುವ ಸರ್ಕಾರ ರೈತ ವಿದ್ಯಾನಿಧಿ ಹಿಂಪಡೆದಿದೆ. ಇದು ರೈತ ವಿರೋಧಿ ಕಾಂಗ್ರೆಸ್ ಸರ್ಕಾರ. ಈ ಪಕ್ಷ ಅನ್ನ ನೀಡುವ ರೈತನಿಗೆ ನೊಟೀಸ್ ನೀಡುವ ಸರ್ಕಾರ. ಈ ಸರ್ಕಾರವನ್ನು ಕಿತ್ತೊಗೆಯಬೇಕು. ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಬಸವರಾಜ ಬೊಮ್ಮಾಯಿ ಒಂದೂ ಮನೆ ಕೊಟ್ಟಿಲ್ಲ ಎಂದಿದ್ದಾರೆ. ಆದರೆ ನಮ್ಮ ತಂದೆ ಒಂದಲ್ಲ ಹದಿನೈದು ಸಾವಿರ ಮನೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಸಿಎಂ ಸಿದ್ದರಾಮಯ್ಯ ಆರೋಪಿ ಸ್ಥಾನದಲ್ಲಿದ್ದು ಅಧಿಕಾರ ನಡೆಸುತ್ತಿದ್ದಾರೆ: ಬಿ.ವೈ ವಿಜಯೇಂದ್ರ
ವರದಾನದಿ ನೀರಾವರಿ ಮೂಲಕ ತಂದೆಯವರು ಕ್ಷೇತ್ರದಲ್ಲಿ ಬರವನ್ನು ಹೋಗಲಾಡಿಸಿದ್ದಾರೆ. ಕ್ಷೇತ್ರದಲ್ಲಿ ಇನ್ನು ಬರ ಬರಲು ಸಾಧ್ಯವೇ ಇಲ್ಲ. ತಂದೆಯವರು ಮಾಡಿದ ಅಭಿವೃದ್ಧಿಯ ಪಟ್ಟಿಯೇ ಇದೆ ಎಂದರು. ನವೆಂಬರ್ 13ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಬಿಜೆಪಿ ಚಿಹ್ನೆಗೆ ಮತಹಾಕುವ ಮೂಲಕ ಗೆಲ್ಲಿಸಬೇಕು. ಮನೆಯ ಮಗನಾಗಿ ನಾನು ಕೆಲಸ ಮಾಡುವುದಾಗಿ ಭರತ್ ಬೊಮ್ಮಾಯಿ ಹೇಳಿದರು.