ಹಾವೇರಿ: ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯಗೆ ತಾನು ತಪ್ಪು ಮಾಡಿದ್ದೇನೆ ಎಂಬ ಭಾವನೆಯೇ ಇಲ್ಲವಾಗಿದ್ದು, ಇಂತಹ ಕ್ಕಿಷ್ಟಕರ ಪರಿಸ್ಥಿತಿಗೆ ತಾನೇ ಕಾರಣ ಎಂಬ ಮನವರಿಕೆಯೂ ಇಲ್ಲ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಗ್ಗಾವಿ ಉಪಚುನಾವಣೆ ಹಿನ್ನಲೆಯಲ್ಲಿ ಇಲ್ಲಿನ ಮಠಗಳಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದ ಇತಿಹಾಸದಲ್ಲಿ ಒಬ್ಬ ಹಾಲಿ ಸಿಎಂ ಕಾನೂನಿನ ವಿಚಾರಣೆ ನಡೆಸಿಲ್ಲ. ತಮ್ಮ ತಪ್ಪೇನೆಂಬುದವರಿಗೆ ಅರಿವೇ ಆಗಿಲ್ಲ.ಹೀಗಾಗಿ ಸಿದ್ದರಾಮಯ್ಯ ಒಬ್ಬ ಪಂಜರದ ಗಿಳಿ ಎಂದು ಹೇಳಿರುವುದಾಗಿ ಸೋಮಣ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿ ನಾಯಕರು ಬೇಲ್ ಮೆಲಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ವಿ.ಸೋಮಣ್ಣ,ಸಿಎಂ ಗೆ ಆತ್ಮಸಾಕ್ಷಿ ಇರುವುದೇ ಆಗಿದ್ದಲ್ಲಿ ಆತ ಒಬ್ಬ ಸರಿಯಾದ ರಾಜಕಾರಣಿಯಾಗಿದ್ದಲ್ಲಿ ತಾನು ಮಾಡಿದ ಪಾಪದ ಕೆಲಸ ಏನು ಎಂದು ಹೇಳಲೀ? ಸಿದ್ದರಾಮಯ್ಯ ಮಾಡಿದ ಪಾಪದ ಕೆಲಸಕ್ಕೆ ನಾವು ಹೊಣೆಯೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೇಲ್ ಮೇಲೆ ಇದ್ದಾರೆ.ಅದರಂತೆಯೇ ಈಗ ಸಿದ್ದರಾಮಯ್ಯಗೆ ಆಗುತ್ತಿದೆ ಎಂದು ಸೋಮಣ್ಣ ಹೇಳಿದರು.
ವಕ್ಪ್ ಆಸ್ತಿ ವಿವಾದ ವಿಚಾರದ ಕುರಿತು ಸುದ್ದಿಗಾರರ ಪ್ರಶ್ಬೆಗೆ ಪ್ರತಿಕ್ರಿಯಿಸಿದ ಅವರು, ಮುಸಲ್ಮಾನರ ಓಲೈಕೆ ಕೆಲಸ ಇಲ್ಲಿಯ ತನಕ ನಿಂತಿಲ್ಲ.ಇದಕ್ಕೆ ಅಂಕಿತ ಹಾಡೋದಕ್ಕೆ, ಪ್ರಧಾನಿ ನರೇಂದ್ರ ಮೋದಿ ದೊಡ್ಡ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದು ತಿಂಗಳಲ್ಲಿ ಇವೆಲ್ಲದಕ್ಕೂ ಸುಖಾಂತ್ಯ ಸಿಗಲಿದೆ. ಕೇಂದ್ರದಲ್ಲಿ ಈ ಸಂಬಂಧ ಬಿಲ್ ಜಾರಿಯಾಗಲಿದೆ. ಲಕ್ಷಾಂತರ ಜನಕ್ಕೆ ಇದರಿಂದ ಅನುಕೂಲವಾಗಲಿದೆ. ವಕ್ಪ್ ಆಸ್ತಿ ವಿವಾದ ಬಿಜೆಪಿ ಆಹಾರವನ್ನಾಗಿ ಮಾಡಿಕೊಂಡಿಲ್ಲ. ಈ ಪಾಪದ ಕೆಲಸಕ್ಕೆ ಸಿದ್ದರಾಮಯ್ಯನೇ ಹೊಣೆಯಾಗಿದ್ದು,ಇದನ್ನು ಇದ್ದಕ್ಕಿದ್ದ ಹಾಗೇ ಸೃಷ್ಟಿ ಮಾಡಿದ್ದೂ ಅವರೇ ಆಗಿದ್ದಾರೆ ಎಂದರು.
ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ತಮಗೆ ಜಮೀರ್ ಅಹ್ಮದ್ ಸಿಕ್ಕಿದ್ದರು. ಆಗ ಅವರಿಗೆ ಬಿಜಾಪುರದಲ್ಲಿ ಹೋಗಿ ಹಲ್ಕಟ್ ಕೆಲಸ ಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದೀಯ. ಜನ ನಿನಗೆ ಬುದ್ದಿ.ಲ ಕಲಿಸುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದ ಸೋಮಣ್ಣ, ತನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು ಎಂಬ ಡಿಕೆ ಶಿವಕುಮಾರ್ ಸಂಸದ ತೇಜಸ್ವಿ ಸೂರ್ಯ ಗೆ ಹೇಳಿರುವ ವಿಚಾರವಾಗಿ ಸುದ್ದಿಗಾರರ ಪಶ್ನೆಯೊಂದಕ್ಕೆ ಉತ್ತರಿಸಿ, ಯಾರು ಈ ರೀತಿ ಮಾತನಾಡುತ್ತಾರೆಯೋ ಅದು ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದು ವಿ.ಸೋಮಣ್ಣ ಹೇಳಿದರು.