ಹಾವೇರಿ: ನಟ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರಾದ ಹಿನ್ನೆಲೆ ಹಾವೇರಿಯ ಶಿಗ್ಗಾವಿಯಲ್ಲಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ಗೆ ಜಾಮೀನು ಮಂಜೂರಾಗಿರುವುದು ಖುಷಿಯಾಗಿದೆ. ಅವರು ನನ್ನ ಆಪ್ತರು. ನಿಮಗೆ ಖುಷಿಯಾಗಿದೆ ತಾನೆ? ನಾನು ಹಾಗೂ ದರ್ಶನ್ ಈ ಘಟನೆ ಆಗೋ ಮುಂಚೆ ಪ್ರತಿ ತಿಂಗಳು ಎರಡು ಸಲ ಭೇಟಿಯಾಗುತ್ತಿದ್ದವು, ಈಗ ಹೋಗಿ ಆರೋಗ್ಯ ವಿಚಾರಿಸದೆ ಇರೋಕೆ ಆಗುತ್ತಾ? ಅಂತಾ ಜಮೀರ್ ಅಹ್ಮದ್ ಹೇಳಿದ್ದಾರೆ.
ನಾನು ದರ್ಶನ ಈ ಘಟನೆ ಆಗುವ ಮುನ್ನ ಪ್ರತಿ ತಿಂಗಳು ಎರಡು ಸಲ ಭೇಟಿಯಾಗುತ್ತಿದ್ದವು, ಒಂದೆರಡು ಸಲ ಭೇಟಿಯಾಗುತ್ತಿದ್ದೇವು. ಈಗ ಹೋಗಿ ಆರೋಗ್ಯ ವಿಚಾರಣೆ ಮಾಡುತ್ತೇನೆ. ಹೋಗಿ ಆರೋಗ್ಯ ವಿಚಾರಿಸದೆ ಇರೋಕೆ ಆಗುತ್ತಾ? ಎಂದು ಜಮೀರ್ ಹೇಳಿದ್ದಾರೆ.
ವಕ್ಪ್ ಆಸ್ತಿ ಒತ್ತುವರಿ ವಿಚಾರ ಕುರಿತಂತೆ ಮಾತನಾಡಿದ ಜಮೀರ್, ಉಪಚುನಾವಣೆಯಲ್ಲಿ ಬಿಜೆಪಿ ಈ ಪ್ರಕರಣ ಎಬ್ಬಿಸಿದ್ದಾರೆ. ಯಾರದು ಆಸ್ತಿಯನ್ನ ಬೇರೆ ಯಾರೋ ತೆಗೆದುಕೊಳ್ಳಲು ಸಾಧ್ಯನಾ? ನಿಮ್ಮ ಆಸ್ತಿ ತೆಗೆದುಕೊಳ್ಳಲು ಸಾಧ್ಯನಾ? ಪೊಲಿಟಿಕಲ್ ಗಿಮಿಕ್ ಇದು. ಮಹರಾಷ್ಟ್ರ ಚುನಾವಣೆ ಇದೆ, ಹೀಗಾಗಿ ಚುನಾವಣೆ ಗಿಮಿಕ್ ಮಾಡ್ತಿದ್ದಾರೆ. ರೈತರು ಅವರು, ಅವರ ಜಾಗೆ ತೆಗೆದುಕೊಳ್ಳುಲು ಆಗಲ್ಲ, ರೈತರ ಆಸ್ತಿ ಮುಟ್ಟಲು ಸಾಧ್ಯನಾ? ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಹಣದ ಮೂಟೆ ಹೊತ್ತುಕೊಂಡು ಓಡಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕ್ಷೇತ್ರ ಇದು, ಮೈಸೂರು, ಶಿವಮೊಗ್ಗ , ಧಾರವಾಡ ಮುಖ್ಯಮಂತ್ರಿ ಹೇಗೆ ಅಭಿವೃದ್ಧಿ ಮಾಡಿದ್ದಾರೆ ನೋಡಿ. ಇಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ನೋಡಿ ಎಂದು ಜಮೀರ್ ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ: ಹಾಸನಾಂಬೆ ದರ್ಶನ: ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಅಲ್ಲದೇ, ಸಿದ್ದರಾಮಯ್ಯ ಇಡೀ ರಾಜ್ಯಕ್ಕೆ ಅಭಿವೃದ್ಧಿ ಮಾಡಿದ್ದಾರೆ, ರಾಜ್ಯ ಇರಲಿ ಬೊಮ್ಮಾಯಿ ತಮ್ಮ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ. ಶಿಗ್ಗಾಂವಿ ಮತದಾರರು ಹಣಕ್ಕೆ ಮಾರಾಟವಾಗುತ್ತಾರಾ? ಸ್ವಾಭಿಮಾನದ ಜನರು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ 8 ಸಾವಿರ ಕಾಂಗ್ರೆಸ್ ಲೀಡ್ ಅಗಿದೆ. ಆಗ ಬೊಮ್ಮಾಯಿ ಶೇಂಗಾ ಬೀಜ ತಿನ್ನುತ್ತಿದ್ದರಾ ಎಂದು ಜಮೀರ್ ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ: ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಪ್ರಧಾನಿ ಮೋದಿ
ವಕ್ಫ್ ಭೂ ವಿವಾದ ಕುರಿತಂತೆ ಗಲಾಟೆ ನಡೆಯುತ್ತಿರುವ ಕಾರಣ ಬಿಜೆಪಿ ನಾಯಕರಿಗೆ ಮನವಿ ಮಾಡಿದ ಜಮೀರ್, ಬಿಜೆಪಿ ನಾಯಕರಿಗೆ ನಮಸ್ಕಾರ. ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ಇಡೀ ರಾಜ್ಯದಲ್ಲಿ ಬಿಜೆಪಿ ಜನಗಳ ದಾರಿ ತಪ್ಪಿಸುತ್ತಿದ್ದಾರೆ. ಅನ್ನಧಾತರ ಜಾಗ ಮುಟ್ಟೋಕೆ ಸಾಧ್ಯನಾ? ನಾನು ವಕ್ಫ್ ಸಚಿವನಾಗಿ ಹೇಳ್ತಿದ್ದಿನಿ ಅವರ ಜಾಗ ಮುಟ್ಟೋಕೆ ಸಾಧ್ಯವಿಲ್ಲ. ರೈತರ ಜಾಗ ಮುಟ್ಟೋಕೆ ಸಾಧ್ಯವೇ ಇಲ್ಲ, ಹಾಗೇ ಬೇರೆಯವರ ಜಾಗ ಮುಟ್ಟೋಕೂ ಸಾಧ್ಯವಿಲ್ಲ ಎಂದು ಜಮೀರ್ ಹೇಳಿದ್ದಾರೆ.