ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ ಎಂದು ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದರು. ಹಾವೇರಿಯಲ್ಲಿ ಮಾತನಾಡಿದ ಅವರು, ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸಿದ್ದಾರೆ. ನಾನು, ದರ್ಶನ್ ಆತ್ಮೀಯ ಸ್ನೇಹಿತರು. ಆದರೆ ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ ಎಂದು ಕೇಳಿದರು.
ವಕ್ಫ್ ಆಸ್ತಿ ವಿಚಾರವಾಗಿ ಮಾತನಾಡಿ, ಇದರಲ್ಲಿ ಬಹಳಷ್ಟು ಸಮಸ್ಯೆ ಇದೆ. ಹೀಗಾಗಿ ಹಾವೇರಿಯಲ್ಲಿ ವಕ್ಫ್ ಅದಾಲತ್ ಹಮ್ಮಿಕೊಂಡಿದ್ದೇವೆ ಎಂದರು. ಜಿ.ಟಿ.ದಿನೇಶ್ ಕುಮಾರ್ ಅಮಾನತು ಮಾಡಿದ್ದು, ನನಗೆ ಗೊತ್ತಿಲ್ಲ. ಅದಕ್ಕೂ ಸಿದ್ದರಾಮಯ್ಯಗೂ ಏನು ಲಿಂಕ್? ಇದಕ್ಕೂ ಸಿದ್ದರಾಮಯ್ಯಗೂ ಲಿಂಕ್ ಇಲ್ಲ. ನನಗೆ ಗೊತ್ತಿಲ್ಲ, ಮಾಹಿತಿ ತಗೊಂಡು ಹೇಳ್ತೀನಿ ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹಿಡಿದುಕೊಟ್ಟರು ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಶತ್ರುಗಳು ಮನುಷ್ಯನಿಗೆ ಇರುವುದು ಸಹಜ. ಎಲ್ಲರಿಗೂ ಶತ್ರುಗಳು ಇರುತ್ತಾರೆ. ನನ್ನ ಜೊತೆನೇ ಇರುತ್ತಾರೆ. ಯಾರು ಶತ್ರು ಅಂತಾ ಗೊತ್ತಾಗುತ್ತೆ? ಯಾರು ಸ್ನೇಹಿತರು ಅಂತಾ ಗೊತ್ತಾಗುತ್ತೆ? ಆ ಲೆಕ್ಕದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಶತ್ರುಗಳು ನಮ್ಮ ಜೊತೆಗೇ ಇರ್ತಾರೆ. ಆದರೆ ಗೊತ್ತಾಗಲ್ಲ. ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್ನವರು ಯಾಕೆ ಹಾಕಿ ಕೊಡ್ತಾರೆ ಎಂದು ಸಚಿವ ಜಮೀರ್ ಪ್ರಶ್ನಿಸಿದರು.