ಹಾವೇರಿ: ಶಿಗ್ಗಾವಿ ಸವಣೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನವರು ತಮ್ಮ ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲದೇ ಬಾಡಿಗೆ ಲೀಡರ್ ಗಳನ್ನ ಕರೆತರುತ್ತಿದ್ದಾರೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಹುಲಗೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರು, ಹುಲಿ ಇದ್ದ ಹಾಗೇ ಅವರು ಸುಮ್ಮನೇ ಘರ್ಜಿಸುವುದಿಲ್ಲ. ಕೊವಿಡ್ ಸಂದರ್ಭದಲ್ಲಿ ಹಗರಣ ಮಾಡಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಶ್ರೀರಾಮುಲು ಮೇಲೆ ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಅವರು ಇಲ್ಲದಿದ್ದರೆ ನಾವೆಲ್ಲರೂ ಬದುಕುತ್ತಿರಲಿಲ್ಲ. ನಮ್ಮ ನಾಯಕರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು ಅವರ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿ:ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಗಡ್ಡ ವಿವಾದ ಸುಖಾಂತ್ಯ!
ಯಡಿಯೂರಪ್ಪ ಒಬ್ಬರೇ ಇದ್ದಾಗಲೇ ಅವರ ಮೇಲೆ ಹಲ್ಲೆ ಮಾಡಿ ಸತ್ತಿದ್ದಾರೆ ಎಂದು ಬಿಟ್ಟು ಹೋಗಿದ್ದರು. ಈಗ ನಾವೆಲ್ಲ ಅವರ ಮಕ್ಕಳು ಇಷ್ಟು ದೊಡ್ಡವರಾಗಿದ್ದೇವೆ. ಅವರ ಬಗ್ಗೆ ಏನಾದರೂ ಮಾತನಾಡಲು ಬಿಡುತ್ತೆವೆಯೇ ಎಂದು ಪ್ರಶ್ನಿಸಿದರು.
ಇದನ್ನು ಓದಿ:ಸುಳ್ಳು ಬಿಜೆಪಿಯ ಪ್ರಬಲ ಅಸ್ತ್ರ: ಬಿಜೆಪಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
ಈಗ ರಾಜ್ಯದಲ್ಲಿ ಕೊವಿಡ್ ಇಲ್ಲ ಆದರೂ ಈಗಿನ ಕಾಂಗ್ರೆಸ್ ಸರ್ಕಾರ ಒಂದೂ ಗುಂಡಿ ಮುಚ್ಚಾಕ ಆಗಿಲ್ಲ. ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯವರು ಮಾಡಿರುವ ರಸ್ತೆಯಲ್ಲಿ ಕಾಂಗ್ರೆಸ್ ನವರು ಓಡಾಡುತ್ತಿದ್ದೀರಿ, ಬೊಮ್ಮಾಯಿ ಕಟ್ಟಿಸಿರುವ ಮನೆ ನೋಡಿ ಕಾಂಗ್ರೆಸ್ ನವರಿಗೆ ಹೊಟ್ಟೆಕಿಚ್ಚು ಬಿದ್ದಿದೆ. ಒಂದೇ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಹದಿನೈದು ಸಾವಿರ ಮನೆ ಯಾವ ಶಾಸಕರೂ ಬಡವರಿಗೆ ಇಷ್ಟೊಂದು ಮನೆ ಕಟ್ಟಿಸಿಲ್ಲ ಎಂದರು.
ಇದನ್ನು ಓದಿ:ಮುಡಾ ಕೇಸ್: ಸಿಎಂ ವಿರುದ್ಧ ಮತ್ತೊಂದು ದಾಖಲೆ ಬಿಡುಗಡೆ
ಕಾಂಗ್ರೆಸ್ ನವರು ಪ್ರಚಾರಕ್ಕೆ ಬಾಡಿಗೆ ಲೀಡರ್ ಗಳನ್ನ ಕರೆತರುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ನಮ್ಮ ಕಾರ್ಯಕರ್ತರೆ ನಮ್ಮ ಚುನಾವಣೆ ಮಾಡುತ್ತಾರೆ ಎಂದು ಕಾರ್ಯರ್ತರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನೀವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಭರತ್ ಬೊಮ್ಮಾಯಿಯನ್ನು ನಿಮಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸುತ್ತಾರೆ ಎಂದು ಬಸವರಾಜ ಬೊಮ್ಮಾಯಿಯವರಿಗೆ ಭರವಸೆ ನೀಡಿದರು.