ಬಿಜೆಪಿ ಜೊತೆ ಸಖ್ಯ ಜೆಡಿಎಸ್ಗೆ ಬಲ ತಂದಿದೆ.. ದೋಸ್ತಿಯ ಜೊತೆ ಕೈ ಜೋಡಿಸಿ ಶಕ್ತಿಯ ವೃದ್ಧಿಯಾಗಿದೆ.. ಕಮಲದೊಳ್ ದಳವಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿದಂತಿದೆ. ಜೆಡಿಎಸ್ ಇದೆಯಾ ಎಂಬ ಕಾಂಗ್ರೆಸ್ ಪಾಳಯಕ್ಕೆ ಉತ್ತರ ಸಿಕ್ಕಿದೆ.. ಕೇಸರಿ ಜೊತೆ ಸೇರಿ ಲೋಕಸಮರದಲ್ಲಿ ಮಣ್ಣಿನ ಮಕ್ಕಳು ಕೊಂಚ ನಿರಾಳರಾಗಿದ್ದಾರೆ.. ಜೊತೆಗೆ ಹೆಚ್ಡಿಕೆಗೆ ಕನಸೊಂದು ನನಸಾಗುವ ಕಾಲ ಹತ್ತಿರವಾಗಿದೆ.
ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಪಕ್ಕಾ..!
ಚುನಾವಣೆಗೂ ಮುನ್ನ ಕೇಳಿಬರ್ತಿದ್ದ ಅದೊಂದು ಮಾತೀಗ ನಿಜವಾಗುವಂತೆ ಕಾಣ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವರಾಗ್ತಾರೆ ಎಂಬ ಚರ್ಚೆ ಸತ್ಯವಾಗು ಕಾಲ ಸನ್ನಿಹಿತವಾಗಿದೆ. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾಗಲಿದೆ.. ಹೀಗಾಗಿ ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಸಿಗೋದು ಫಿಕ್ಸ್ ಎಂಬ ಮಾತು ಮಾರ್ಧನಿಸುತ್ತಿದೆ. ಒಂದು ವೇಳೆ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ನೀಡುವ ಭರವಸೆ ಸಿಕ್ಕರೆ ಜೆಡಿಎಸ್ ಕೃಷಿ ಖಾತೆಯನ್ನೇ ಕೇಳಲಿದೆ ಎನ್ನಲಾಗುತ್ತಿದೆ.
ಒಟ್ಟಾರೆ, ಅಂದುಕೊಂಡಂತೆ ಮೂರೂ ಸ್ಥಾನಗಳನ್ನ ಗೆಲ್ಲಲು ಆಗದೇ ಇದ್ರೂ ದಳಪತಿಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ.. ಪ್ರಜ್ವಲ್ ರೇವಣ್ಣನ ಸೋಲಿನ ಕಹಿಯ ನಡುವೆಯೂ ಕಳೆದ ಬಾರಿಗಿಂತ 1 ಸ್ಥಾನ ಹೆಚ್ಚಿಸಿಕೊಂಡಿರೋದು ಖುಷಿ ಕೊಟ್ಟಂತಿದೆ.. ಈ ಮೂಲಕ ಕಮಲದ ಜೊತೆಗಿನ ದೋಸ್ತಿ ದಳಪತಿಗಳಿಗೆ ಪಾಸಿಟಿವ್ ಆದಂತಿದೆ.