ಸಾಮಾನ್ಯವಾಗಿ ನಾವೆಲ್ಲರೂ ದಿನದ ಆರಂಭ ಮಾಡುವುದು ಒಂದು ಕಪ್ ಟೀ ಅಥವಾ ಕಾಫಿಯಿಂದ. ಇನ್ನು ಕೆಲವರು ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವವರು ಯಾವುದಾದರೂ ಜ್ಯೂಸ್ ಕುಡಿಯುತ್ತಾರೆ. ಬೆಳಗಿನ ಜಾವ ಕಾಫಿ ಬದಲಿಗೆ ಬಿಸಿ ಬಿಸಿಯಾಗಿ ಶುಗರ್ಲೆಸ್ ಬ್ಲ್ಯಾಕ್ ಕಾಫಿ ಕುಡಿದರೆ ತುಂಬಾ ಪರಿಣಾಮಕಾರಿ. ಬ್ಲ್ಯಾಕ್ ಕಾಫಿ ಕುಡಿದರೆ ಅದರಿಂದ ನಾನಾ ರೀತಿಯ ಲಾಭಗಳು ಕೂಡ ದೇಹಕ್ಕೆ ಸಿಗುತ್ತವೆ.
1. ಬ್ಲ್ಯಾಕ್ ಕಾಫಿ ಕ್ಯಾಲರಿ ಮುಕ್ತ ಪಾನೀಯವಾಗಿದ್ದು, ಇದು ದೇಹಕ್ಕೆ ಶಕ್ತಿ ನೀಡುವ ಜತೆಗೆ ತೂಕ ನಿರ್ವಹಣೆಗೆ ಸಹಕಾರಿ.
2. ಕ್ಲೋರೊಜೆನಿಕ್ ಆಮ್ಲವು ಬ್ಲ್ಯಾಕ್ ಕಾಫಿಯಲ್ಲಿದೆ. ಇದು ಗ್ಲುಕೋಸ್ ಉತ್ಪತ್ತಿ ನಿಧಾನಗೊಳಸಿ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ.
3. ಬ್ಲ್ಯಾಕ್ ಕಾಫಿಯು ಆರಾಮ ನೀಡುವುದು ಮತ್ತು ಮನಸ್ಥಿತಿ ಸುಧಾರಣೆ ಮಾಡುವುದು. ಇದು ಮನಸ್ಥಿತಿ ಸುಧಾರಿಸಿ, ಒತ್ತಡ ಕಡಿಮೆ ಮಾಡುವುದು.
4. ಬ್ಲ್ಯಾಕ್ ಕಾಫಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಹಾಗೂ ಮಧುಮೇಹದ ಅಪಾಯ ತಗ್ಗಿಸುವುದು.
5. ಯಕೃತ್ ನಮ್ಮನ್ನು ಆರೋಗ್ಯವಾಗಿ ಇಡುವುದು. ಅದೇ ಬ್ಲ್ಯಾಕ್ ಕಾಫಿಯು ಯಕೃತ್ನಲ್ಲಿ ಇರುವ ಹಾನಿಕಾರಕ ಕಿಣ್ವಗಳನ್ನು ಕಡಿಮೆ ಮಾಡುವುದು.
6. ಬ್ಲ್ಯಾಕ್ ಕಾಫಿಯು ಯಕೃತ್ ಕ್ಯಾನ್ಸರ್ ತಡೆಯುವುದು. ಕೊಬ್ಬಿನಾಮ್ಲಗಳು, ಹೆಪಟಿಟಿಸ್ ಮತ್ತು ಸಿರೋಸಿಸ್ ಸಮಸ್ಯೆಯನ್ನು ತಗ್ಗಿಸುವುದು.