ಈಗಿನ ಕಾಲಘಟ್ಟದಲ್ಲಿ ಜನರ ಜೀವನ ಶೈಲಿ ತುಂಬಾ ಹದೆಗೆಟ್ಟಿದೆ. ತಂದೆ, ತಾಯಿ, ಹೆಂಡತಿ, ಮಕ್ಕಳೊಟ್ಟಿಗೆ ಬೆರೆತು ನಾಲ್ಕು ಪ್ರೀತಿಯಿಂದ ಮಾತುಗಳನ್ನಾಡುತ್ತಾ ನೆಮ್ಮದಿಯಿಂದ ಊಟ ಮಾಡೊಕು ಟೈಮ್ಯಿಲ್ಲ. ಅಷ್ಟರ ಮಟ್ಟಿಗೆ ಜನ ಬ್ಯುಸಿ ಆಗಿ ಹೋಗಿದ್ದಾರೆ. ಶೈಲಿಗೆ ತಕ್ಕಂತೆ ಬದಲಾಗುತ್ತಿರುವ ಒತ್ತಡದಿಂದ ಹೊರ ಬರಲಾಗದೇ ಮೆಂಟಲ್ ಹೆಲ್ತ್ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಡೆತ್ ಕೇಸ್ಗಳು ಕೂಡ ಜಾಸ್ತಿಯಾಗಿವೆ.
ಬೃಹತ್ ಬೆಂಗಳೂರಿನಂತಹ ಮಹಾನಗರದಲ್ಲಿ ಜನರು ದುಡ್ಡಿಗೆ ಬೆನ್ನಟ್ಟಿ ತಮ್ಮ ಆರೋಗ್ಯದ ಬಗ್ಗೆ ಕಿಂಚಿತು ಯೋಚಿಸುತ್ತಿಲ್ಲ. ಬರೀ ಕೆಲಸ.. ಕೆಲಸ.. ಈ ಕೆಲಸದ ಒತ್ತಡದಿಂದ ತಮ್ಮನ ತಾವೇ ಮರೆತು ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ. ಕೊರೊನಾದಂತಹ ಮಹಾಮಾರಿಯಿಂದಾಗಿ ಈ ಹಿಂದೆ ಎಷ್ಟೋ ಜನ ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಕಂಪನಿಗಳು ತುಂಬಾನೇ ಲಾಸ್ ಅನುಭವಿಸಿವೆ. ಎಷ್ಟೋ ಜನರು ಆರ್ಥಿಕ ಸಮಸ್ಯೆಯಿಂದಾಗಿ ಇವತ್ತಿಗೂ ನರಳುತ್ತಿದ್ದಾರೆ. ಇದರ ಪರಿಣಾಮ ಜನರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದ್ದು, ಅದರಲ್ಲಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿವೆ.
ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, ಈ ವರ್ಷವು ಮೆಂಟಲ್ ಹೆಲ್ತ್ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡೀ ಅಂತ ವೈದ್ಯರು ಸಲಹೆ ನೀಡ್ತಿದ್ದಾರೆ. ಈ ಆತಂಕ, ಅನಾವಶ್ಯಕ ಕೋಪ, ನಿದ್ರಾ ಹೀನಾತೆ, ಟೆನ್ಶನ್, ಜಿಗುಪ್ಸೆ, ಕುಟುಂಬ ಕಲಹ, ಲವ್ ಬ್ರೇಕಪ್ಸ್, ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಂತಹ ಸಮಸ್ಯೆಗಳು ನಮ್ಮ ಮನೆಯವರಲ್ಲಿ ಅಥವಾ ಸ್ನೇಹಿತರಲ್ಲಿ ಕಂಡುಬರುತ್ತಿದ್ರೆ ಅವರನ್ನ ಒಮ್ಮೆ ವೈದ್ಯರಿಗೆ ತೋರಿಸುವುದು ಒಳಿತು ಅಂತ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಮೆಂಟಲ್ ಹೆಲ್ತ್ ಸಮಸ್ಯೆಗಳು ಮಹಿಳೆಯರು, ಪುರುಷರು ಮಕ್ಕಳಲ್ಲಿ ಹೆಚ್ಚಾಗಿ ಕಾಣಬರುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಸಮಸ್ಯೆಗಳನ್ನ ಎದರಿಸುವಲ್ಲಿ ಜನರು ಗೊಂದಲಕ್ಕೆ ಇಡಾಗುತ್ತಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಾದ್ರೆ ಮೆಂಟಲ್ ಹೆಲ್ತ್ ಸಮಸ್ಯೆಗಳು ಬಂದಾಗ ಏನೆಲ್ಲ ಲಕ್ಷಣಗಳು ಕಂಡುಬರುತ್ತವೆ ಗೊತ್ತಾ?
ನಿದ್ರೆ ಮಾಡದೇ ಇರುವುದು, ಊಟ ಮಾಡದೇ ಇರುವುದು, ಹೆಚ್ಚು ಊಟ ಮಾಡುವುದು, ಮಹಿಳೆಯರಲ್ಲಿ ಹಾರ್ಮೋನ್ ಇನ್ ಬ್ಯಾಲೆನ್ಸ್ ಆಗುವುದು ಹವಾಮಾನ ವೈಪರಿತ್ಯದಿಂದ ಹೆಚ್ಚು ಕೋಪ ಬರುವುದು, ಜನರೊಂದಿಗೆ ಹೆಚ್ಚು ಸೇರದೇ ಇರುವುದು, ಹೆಚ್ಚು ಯೋಚನೆ ಮಾಡುವುದು, ಸಾವಿನ ಬಗ್ಗೆ ಮಾತಾಡುವುದು, ಇಂತಹ ಲಕ್ಷಣಗಳು ಕಂಡುಬಂದ್ರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು ಅಂತ ಡಾಕ್ಟರ್ ಸಲಹೆ ನೀಡ್ತಿದ್ದಾರೆ. ಇಂತಹ ಮೆಂಟಲ್ ಹೆಲ್ತ್ ಸಮಸ್ಯೆಗಳಿಗೆ ಏನೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂದು ಇಲ್ಲಿ ತಿಳಿಯಿರಿ.
ಯೋಗ ಮಾಡುವುದು, ಕುಟುಂಬದೊಂದಿಗೆ ಹೆಚ್ಚು ಬೆರೆಯುವುದು, ಆತ್ಮ ವಿಶ್ವಾಸ ಹೆಚ್ಚು ರೂಢಿಸಿಕೊಳ್ಳುವುದು, ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದು, ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು. ನಿಮ್ಹಾನ್ಸ್ ಆಸ್ಪತ್ರೆಗೆ ಪ್ರತಿವರ್ಷ 6 ಲಕ್ಷಕ್ಕೂ ಹೆಚ್ಚು ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರಿಂದ ಎಲ್ಲರಿಗೂ ಹೇಳೊದಿಷ್ಟೆ ಆದಷ್ಟು ಆರೋಗ್ಯದ ಕಡೆ ಗಮನ ಕೊಡಿ. ನಿಮಗೆ ಸಾವಿರ ಟೆನ್ಶನ್ ಇರಬಹುದು ಅದನ್ನೆಲ್ಲ ಬದಿಗೆ ಒತ್ತಿ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ.