ಯೋಗವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ವಿಶ್ವಾಸಾರ್ಹ ಅಭ್ಯಾಸವಾಗಿದೆ ಮತ್ತು ದೇಹದ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಇದರ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ಇದು ಆಳವಾದ ಉಸಿರಾಟದ ಪ್ರಯೋಜನಗಳ ಬಗ್ಗೆ ಒತ್ತಿ ಹೇಳುತ್ತದೆ ಮತ್ತು ದೈಹಿಕ ಸಂವೇದನೆಗಳಿಗೆ ಗಮನ ಕೊಡುತ್ತದೆ, ಇದು ನಮ್ಮ ಏಕಾಗ್ರತೆ ಮತ್ತು ಸ್ಮರಣೆಯನ್ನು ಸಹ ಸುಧಾರಿಸುತ್ತದೆ. ಯೋಗವು ಮೆದುಳು ಸೇರಿದಂತೆ ದೇಹದಾದ್ಯಂತ ಆಮ್ಲಜನಕ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದು ನಮ್ಮ ಅರಿವಿನ ಕಾರ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಮಕ್ಕಳು ಮತ್ತು ವಿದ್ಯಾರ್ಥಿಗಳು ತಮ್ಮ ಗಮನ ಅಗತ್ಯವಿರುವ ಶೈಕ್ಷಣಿಕ ಮತ್ತು ಪಠ್ಯೇತರರಿಂದ ಹಲವಾರು ಬದ್ಧತೆಗಳನ್ನು ಹೊಂದಿರುತ್ತಾರೆ. ಯೋಗದ ಸಹಾಯದಿಂದ, ಅವರು ಆಳವಾದ ಏಕಾಗ್ರತೆಯನ್ನು ಸಾಧಿಸಬಹುದು ಮತ್ತು ಅವರ ಸ್ಮರಣೆಶಕ್ತಿಯನ್ನು ಸಹ ಸುಧಾರಿಸಿಕೊಳ್ಳಬಹುದು. ಇದು ಅವರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ, ಅಲ್ಲದೆ ಇದು ಅವರ ಒಟ್ಟಾರೆ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಒತ್ತಡವನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ.
ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸುವ 7 ಯೋಗಾಸನಗಳು
ಸೂರ್ಯ ನಮಸ್ಕಾರ: ಅನೇಕ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಪ್ರತಿದಿನ ಅಭ್ಯಾಸ ಮಾಡಿಸಲಾಗುತ್ತದೆ, ಈ ಯೋಗಾಸನವು ದೈಹಿಕ ಆರೋಗ್ಯವನ್ನು ಸುಧಾರಿಸುವುದರಿಂದ ಏಕಾಗ್ರತೆಯನ್ನು ಸುಧಾರಿಸುವವರೆಗೆ ಅದರ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಇದು ಆಳವಾದ ಉಸಿರಾಟ ಮತ್ತು ನೇರವಾಗಿ ನಿಲ್ಲುವುದನ್ನು ಒಳಗೊಂಡಿರುವ ಪ್ರಣಾಮಾಸನದಿಂದ ಪ್ರಾರಂಭವಾಗುವ 12 ಯೋಗ ಭಂಗಿಗಳ ಸಂಯೋಜನೆಯಾಗಿದೆ.
ಬಾಲಾಸನ: ನಿಮ್ಮ ಬೆನ್ನನ್ನು ನೆಟ್ಟಗೆ ಇರಿಸಿಕೊಂಡು ಚಾಪೆಯ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಂತರ ನಿಮ್ಮ ಕೈಗಳನ್ನು ಮುಂದಕ್ಕೆ ಹಿಗ್ಗಿಸಿ ಉಸಿರಾಡಿ. ಈ ಭಂಗಿಯು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸಹ ಸುಧಾರಿಸುತ್ತದೆ.
ಅನುಲೋಮ ವಿಲೋಮ ಪ್ರಾಣಾಯಾಮ: ಇದು ಮತ್ತೊಂದು ಸಾಮಾನ್ಯ ಯೋಗ ತಂತ್ರವಾಗಿದ್ದು, ಅನುಲೋಮ ವಿಲೋಮ ಪ್ರತಿ ಮೂಗಿನ ಹೊಳ್ಳೆಯ ಮೂಲಕ ಉಸಿರಾಟವನ್ನು ತೆಗೆದುಕೊಳ್ಳುವುದು ಮತ್ತು ಬಿಡುವುದನ್ನು ಒಳಗೊಂಡಿರುತ್ತದೆ. ಈ ಅಭ್ಯಾಸವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸಹ ಹೆಚ್ಚಿಸುತ್ತದೆ. ಇದು ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ವೃಕ್ಷಾಸನ: ಈ ಯೋಗ ಭಂಗಿಯು ದೇಹವನ್ನು ಒಂದು ಕಾಲಿನ ಮೇಲೆ ಸಮತೋಲನಗೊಳಿಸುತ್ತದೆ ಮತ್ತು ಇನ್ನೊಂದು ಕಾಲನ್ನು ನಿಂತಿರುವ ಕಾಲಿನ ಒಳ ತೊಡೆಯ ಮೇಲೆ ಇರಿಸುತ್ತದೆ. ನಿಮ್ಮ ತೋಳುಗಳನ್ನು ಮೇಲ್ಭಾಗದಲ್ಲಿ ವಿಸ್ತರಿಸಬೇಕು. ಈ ಅಭ್ಯಾಸವು ಉತ್ತಮ ಸ್ಮರಣೆಗೆ ಕಾರಣವಾಗುವ ಗಮನವನ್ನು ಹೆಚ್ಚಿಸುತ್ತದೆ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ, ಅಲ್ಲದೆ ಆತಂಕವನ್ನು ಸಹ ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.
ಸರ್ವಾಂಗಾಸನ: ಇದು ಪೂರ್ಣ-ದೇಹದ ವ್ಯಾಯಾಮವಾಗಿದ್ದು, ಇದು ನಿಮ್ಮ ಇಡೀ ದೇಹದ ತೂಕವನ್ನು ನಿಮ್ಮ ಭುಜದ ಮೇಲೆ ಇರಿಸುವಂತೆ ಮಾಡುತ್ತದೆ ಮತ್ತು ಭುಜಗಳ ಮೇಲೆ ವಿಶ್ರಾಂತಿ ಪಡೆಯುವುದನ್ನು ಒಳಗೊಂಡಿರುತ್ತದೆ. ಈ ಯೋಗಾಸನವು ಶಕ್ತಿ, ನಮ್ಯತೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸಹ ಉತ್ತೇಜಿಸುತ್ತದೆ.
ತ್ರಾಟಕ ಧ್ಯಾನ: ಈ ತ್ರಾಟಕ ಧ್ಯಾನವು ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಒಳಗೊಂಡಿರುತ್ತದೆ ಮತ್ತು ಸಾಮಾನ್ಯವಾಗಿ ಮೇಣದಬತ್ತಿಯ ಜ್ವಾಲೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಈ ಸರಳವಾದ ಆದರೆ ಪರಿಣಾಮಕಾರಿ ವ್ಯಾಯಾಮವು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತದೆ, ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅರಿವಿನ ಉನ್ನತ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ, ಈ ವ್ಯಾಯಾಮವು ದೃಷ್ಟಿಯನ್ನು ಸುಧಾರಿಸುತ್ತದೆ.
ಪಶ್ಚಿಮೋತ್ತನಾಸನ: ಇದು ಬೆನ್ನುಮೂಳೆ, ಭುಜಗಳು ಮತ್ತು ಮಂಡಿರಜ್ಜುಗಳನ್ನು ವಿಸ್ತರಿಸುತ್ತದೆ. ಈ ಆಸನವು ರಕ್ತದ ಹರಿವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತ ಸ್ಮರಣೆಯನ್ನು ಸುಧಾರಿಸುತ್ತದೆ.