ಅಲರ್ಜಿ ಅನ್ನುವುದು ಹಲವಾರು ವಿಧದಿಂದ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಈ ಅಲರ್ಜಿಗಳಿಂದ ತುಂಬಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ. ಅಲರ್ಜಿಗೆ ಸೂಕ್ತವಾದ ಚಿಕಿತ್ಸೆ ಮಾಡಿಸಿಕೊಂಡರೆ ಮಾತ್ರ ಖಂಡಿತವಾಗಿಯೂ ಇದರಿಂದ ಮುಕ್ತಿ ಪಡೆಯಬಹುದು.
ಕೆಲವರಿಗೆ ಅತಿಯಾದ ತುರಿಕೆಯಿಂದ ಉಂಟಾಗಬಹುದು. ಪೈಂಟ್, ಸಿಮೇಂಟ್ನಲ್ಲಿ ಕಂಡು ಬರುವ ರಾಸಾಯನಿಕಗಳಿಂದ ಹಿಡಿದು, ಅಡುಗೆ ಮನೆಯಲ್ಲಿ ಬಳಕೆ ಮಾಡುವ ಕೆಲವು ಸಾಮಾಗ್ರಿಗಳಿಂದಲೂ ಅಲರ್ಜಿ ಉಂಟು ಮಾಡಬಹುದು. ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಳ್ಳುತ್ತಿದ್ದರೆ, ತಕ್ಷಣವೇ ವೈದ್ಯರನ್ನ ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ. ಚರ್ಮದ ಅಲರ್ಜಿಗೆ ಕೆಲವೊಂದು ಮನೆಮದ್ದುಗಳನ್ನು ಬಳಸಬಹುದು.
1.ಅಲರ್ಜಿಯಿಂದ ಕಾಣಿಸಿಕೊಳ್ಳುವ ತುರಿಕೆ ಮತ್ತು ಉರಿಯೂತಕ್ಕೆ ಬೇಕಿಂಗ್ ಸೋಡಾವು ತುಂಬಾ ಲಾಭಕಾರಿ. ಬೇಕಿಂಗ್ ಸೋಡಾ ಮತ್ತು ನೀರು ಹಾಕಿ ಪೇಸ್ಟ್ ಮಾಡಿಕೊಂಡು ಬಳಸಿಕೊಳ್ಳಬಹುದು.
2. ಓಟ್ಸ್ ಮೀಲ್ನಲ್ಲಿ ಆಲ್ಕಲಾಯ್ಡ್ನ ಗುಂಪು ಇದ್ದು, ಇದು ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಊತ ಕಡಿಮೆ ಮಾಡುವುದು ಮಾತ್ರವಲ್ಲದೆ, ತುರಿಕೆ ಮತ್ತು ಚರ್ಮದಲ್ಲಿನ ಕಿರಿಕಿರಿ ತಗ್ಗಿಸುವುದು.
3. ಅಲೋವೆರಾವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇದರಲ್ಲಿದೆ. ಇದು ಚರ್ಮಕ್ಕೆ ಶಮನ ನೀಡುವುದು ಮತ್ತು ಕೆಂಪಾಗಿರುವುದನ್ನು ಕಡಿಮೆ ಮಾಡುವುದು.
4. ಆಲಿವ್ ತೈಲದಲ್ಲಿ ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶವು ಉತ್ತಮ ಪ್ರಮಾಣದಲ್ಲಿದೆ. ಇದು ಚರ್ಮಕ್ಕೆ ರಕ್ಷಣೆ ನೀಡುವುದು.
5. ಆ್ಯಪಲ್ ಸೀಡರ್ ವಿನೇಗರ್ ಸಹ ಚರ್ಮದ ಅಲರ್ಜಿಗೆ ತುಂಬಾ ಕೆಲಸ ಮಾಡುವುದು. ನೈಸರ್ಗಿಕ ಉತ್ಪನ್ನವನ್ನು ಬಳಸಿಕೊಂಡರೆ ಅದರಲ್ಲಿ ಇರುವ ಅಸಿಟಿಕ್ ಆಮ್ಲವು ಚರ್ಮದ ಅಲರ್ಜಿ ವಿರುದ್ಧ ಹೋರಾಡುತ್ತೆ.