- ಕಬ್ಬಿನ ರಸ ಕುಡಿದರೆ ನೀರಿನ ಅಂಶ ಕಡಿಮೆಯಾಗುತ್ತೆ
- ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ
- ಮಧುಮೇಹ ಸಮಸ್ಯೆ ಉಂಟಾಗುವ ಸಾಧ್ಯತೆ
ಈಗ ಬೇಸಿಗೆ ಕಾಲ ಮುಗಿದು ಮುಂಗಾರು ಶುರುವಾಗಿದ್ದರೂ ಹೊರಗೆ ಹೋದಲೆಲ್ಲಾ ಜ್ಯೂಸ್ ಅಂಗಡಿಗಳು ಹೆಚ್ಚು ಸಿಗುತ್ತವೆ . ಕಬ್ಬಿನ ಜ್ಯೂಸ್ ವಿವಿಧ ಜ್ಯೂಸ್ ಫಲೂದ ಅಂಗಡಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕಬ್ಬಿನ ಜ್ಯೂಸ್ ಕುಡಿಯುವುದನ್ನು ನಿಲ್ಲಿಸಲು ಸೂಚಿಸಿದೆ. ಏಕೆಂದರೆ ಹೆಚ್ಚು ಕಬ್ಬಿನ ರಸವನ್ನು ಕುಡಿದರೆ ನೀರಿನ ಅಂಶ ಕಡಿಮೆಯಾಗುತ್ತದೆ.
ಕಬ್ಬಿನ ರಸದಲ್ಲಿರುವ ನೈಸರ್ಗಿಕ ಸಕ್ಕರೆ ಅನೇಕ ರೋಗಗಳಿಗೆ ಕಾರಣವಾಗಬಹುದು ಕಬ್ಬಿನ ರಸದ ಮೂಲಕ ಸಕ್ಕರೆಯನ್ನು ಸೇವಿಸುವುದರಿಂದ ಸಕ್ಕರೆಯನ್ನು ಗ್ಲೋಕೋಸ್ ಆಗಿ ಪರಿವರ್ತಿಸಲು ಸಾಕಷ್ಟು ನೀರು ಬೇಕಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಕಬ್ಬಿನ ರಸ ಬಾಯಾರಿಕೆಯಾದಾಗ ತೆಗೆದುಕೊಂಡರೆ ರಕ್ತದಲ್ಲಿನ ಗ್ಲೋಕೋಸ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ಇನ್ಸುಲಿನ್ ಮತ್ತು ಮಧುಮೇಹ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕಬ್ಬಿನ ರಸದಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಇದು ದೇಹದ ತೂಕವನ್ನು ಹೆಚ್ಚಿಸುವುದಲ್ಲದೆ ಮಧುಮೇಹ ಮತ್ತು ಹೃದಯದ ತೊಂದರೆಗಳನ್ನು ಉಂಟುಮಾಡುತ್ತದೆ. ಕಬ್ಬಿನ ರಸದಲ್ಲಿ ಕಾರ್ಬೋಹೈಡೇಟ್ ಅಂಶ ಹೆಚ್ಚಿದ್ದು, ಕ್ಯಾಲೋರಿ ಹೆಚ್ಚಿಸಿ ತೂಕ ಹೆಚ್ಚುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ.