ಎಕ್ಸ್ ಪ್ರೆಸ್ ವೇ ಗಳನ್ನು ಬಳಕೆ ಮಾಡುವ ವಾಹನ ಸವಾರರು ಇಂದಿನಿಂದ ಟೋಲ್ ಗಳಲ್ಲಿ ಹೆಚ್ಚಿನ ದರ ನೀಡಬೇಕಾಗುತ್ತದೆ. ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶಾದ್ಯಂತ ಹೆದ್ದಾರಿಗಳ ಟೋಲ್ ದರವನ್ನು ಶೇ.5 ರಷ್ಟು ಏರಿಕೆ ಮಾಡಿದೆ.
- ಟೋಲ್ ದರ ವಾರ್ಷಿಕ ಶೇ.5 ರಷ್ಟು ಹೆಚ್ಚಾಗುವುದು ವಾಡಿಕೆ.
- ಏಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಯಾಗಬೇಕಿತ್ತು
- ಲೋಕಸಭಾ ಚುನಾವಣೆ ಕಾರಣ ಪರಿಷ್ಕೃತ ದರ ಜಾರಿ ವಿಳಂಬ
- ಟೋಲ್ ತೆರಿಗೆ ಹೆಚ್ಚಳ ಸಮಾಜದ ಅನೇಕ ವರ್ಗಗಳ ಮೇಲೆ ಪರಿಣಾಮ ಬೀರಿದೆ
- ಕಳೆದ ವರ್ಷ ಭಾರತವು ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲು ಶತಕೋಟಿ ಹೂಡಿಕೆ
- ಎಕ್ಸ್ಪ್ರೆಸ್ ವೇ ಬಳಕೆ ಮಾಡುವ ವಾಹನ ಸವಾರರೇ ಎಚ್ಚರವಾಗಿರಿ. NHAIನಿಂದ ಹೆದ್ದಾರಿಗಳ ಟೋಲ್ ಶೇಕಡಾ.5 ರಷ್ಟು ಏರಿಕೆಯಾಗಿದ್ದು. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
ಇನ್ನು ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಮತ್ತು ಅಶೋಕ್ ಬಿಲ್ಡ್ಕಾನ್ ಲಿಮಿಟೆಡ್ ನಂತರ ಉನ್ನತ ನಿರ್ವಾಹಕರಿಗೆ ಟ್ರೋಲ್ ತೆರಿಗೆ ಹೆಚ್ಚಳದಿಂದ ಪ್ರಯೋಜನ ಸಿಗಲಿದೆ ಎಂದು ಹೇಳಲಾಗುತ್ತಿದೆ.