- ಕಿರುತೆರೆ ನಟಿ ಹಿನಾಖಾನ್ ಅವರಿಗೆ ಸ್ತನದ ಕ್ಯಾನ್ಸರ್
- ಈ ರೋಗದ ವಿರುದ್ಧ ಜಯಸಿ ಬರಲಿ ಎಂದು ಫ್ಯಾನ್ಸ್ ಪ್ರಾರ್ಥನೆ
ಹಿಂದಿಯ ಕಿರುತೆರೆ ನಟಿ ಹಿನಾ ಖಾನ್ ಅವರಿಗೆ ಸ್ತನದ ಕ್ಯಾನ್ಸರ್ ಪತ್ತೆ ಆಗಿದೆ. ಸ್ತನ ಕ್ಯಾನ್ಸರ್ ಮೂರನೇ ಹಂತದಲ್ಲಿದೆ. ಈ ಬಗ್ಗೆ ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, ಹಿನಾ ಖಾನ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ದೇವರು ಕೊಡಲಿ ಎಂದು ಅವರ ಫ್ಯಾನ್ಸ್ ಕೋರಿಕೊಂಡಿದ್ದಾರೆ. ಈ ರೋಗದ ವಿರುದ್ಧ ಅವರು ಜಯಸಿ ಬರಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ಹಿಂದಿಯ “ಯೇ ರಿಷ್ತಾ ಕ್ಯಾ ಕೆಹ್ಲಾತಾ ಹೇ”, “ಕೌಸಟಿ ಜಿಂದಗಿ ಕೇ 2” ಧಾರವಾಹಿಗಳಲ್ಲಿ ಅವರು ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಿನಾ ಖಾನ್ ಅವರು ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ‘ನಾನು ಒಂದು ಪ್ರಮುಖ ಸುದ್ದಿ ಹಂಚಿಕೊಳ್ಳಬೇಕು. ನನಗೆ ಮೂರನೇ ಸ್ಟೇಜ್ನ ಸ್ತನ ಕ್ಯಾನ್ಸರ್ ಇದೆ’ ಎಂದು ಹಿನಾ ಖಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಚೆನ್ನಾಗಿಯೇ ಇದ್ದೇನೆ. ನಾನು ಗಟ್ಟಿ ಇದ್ದೇನೆ. ಈ ರೋಗದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇನೆ. ನನಗೆ ಚಿಕಿತ್ಸೆ ಕೊಡಿಸುವ ಕೆಲಸ ಶುರುವಾಗಿದೆ. ಮತ್ತಷ್ಟು ಗಟ್ಟಿಯಾಗಿ ಬರಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತೇನೆ’ ಎಂದಿದ್ದಾರೆ.